ಐವರ್ನಾಡು ಹಾಲು ಉತ್ಪಾದಕರ ಸಹಕಾರ ಸಂಘದ ವಾರ್ಷಿಕ ಸಾಮಾನ್ಯ ಸಭೆ – ಸನ್ಮಾನ

0

ಐವರ್ನಾಡು ಹಾಲು ಉತ್ಪಾದಕರ ಸಹಕಾರ ಸಂಘದ ವಾರ್ಷಿಕ ಸಾಮಾನ್ಯ ಸಭೆಯು ಸೆ.19 ರಂದು ಸಂಘದ ಅಧ್ಯಕ್ಷ ವಸಂತ ಕುಮಾರ್ ನಾಟಿಕೇರಿಯವರ ಅಧ್ಯಕ್ಷತೆಯಲ್ಲಿ ಸಂಘದ ಸಭಾಭವನದಲ್ಲಿ ನಡೆಯಿತು. ಸಂಘದ ಕಾರ್ಯದರ್ಶಿ ಹಿರಿಯಣ್ಣ ಕೆ.ವರದಿ ಮಂಡಿಸಿದರು. ಒಕ್ಕೂಟದ ವಿಸ್ತರಣಾಧಿಕಾರಿ ಶಿವಕುಮಾರ್ ರವರು ಲೆಕ್ಕ ಪರಿಶೋಧನಾ ವರದಿ,ಸಂಘದ ಚಟುವಟಿಕೆಗಳ ಬಗ್ಗೆ ಮತ್ತು ಮುಂದಿನ ಯೋಜನೆಯ ಬಗ್ಗೆ ಮಾಹಿತಿ ನೀಡಿದರು. 2025 -26 ನೇ ಸಾಲಿನ ನಿವ್ವಳ ಲಾಭ ರೂ.107567.51ನ್ನು ನಿಯಮಾನುಸಾರ ವಿಂಗಡಿಸಿ 1.ಲೀ ಹಾಲಿಗೆ 0.35 ಪೈಸೆಯಂತೆ ಬೋನಸ್ಸು ನೀಡಲು ತೀರ್ಮಾನಿಸಲಾಯಿತು.
ವಾರ್ಷಿಕ ಸಾಮಾನ್ಯ ಸಭೆಯಲ್ಲಿ 2025 – 26 ನೇ ಸಾಲಿನಲ್ಲಿ ಅತೀ ಹೆಚ್ಚು ಹಾಲು ಹಾಕಿದ ಸದಸ್ಯರನ್ನು ಮತ್ತು ತಾಲೂಕಿನಲ್ಲಿ ಉತ್ತಮ ಕೃತಕ ಗರ್ಭಧಾರಣಾ ಕಾರ್ಯಕರ್ತರಾಗಿ ಆಯ್ಕೆಯಾದ ಸಂಘದ ಕಾರ್ಯದರ್ಶಿ ಹಿರಿಯಣ್ಣ ಗೌಡ ಕೆ.ಇವರನ್ನು ಮತ್ತು BNSY ಯಲ್ಲಿ ಗೋಲ್ಡ್ ಮೆಡಲ್ ಪಡೆದ ಡಾ.ಗೌತಮಿ ಬಿ.ಹುಲಿಮನೆ ಇವರನ್ನು ಸಂಘದ ವತಿಯಿಂದ ಸನ್ಮಾನಿಸಲಾಯಿತು.2026 ನೇ ಸಾಲಿನಲ್ಲಿ ಹಾಲು ಹಾಕಿದ ಎಲ್ಲಾ ಸದಸ್ಯರಿಗೂ ಬಹುಮಾನ ನೀಡಲಾಯಿತು.
ವೇದಿಕೆಯಲ್ಲಿ ಸಂಘದ ಉಪಾಧ್ಯಕ್ಷ ಜಯಂತ ಬಿ, ನಿರ್ದೇಶಕರಾದ ಶ್ರೀನಿವಾಸ ಎಂ,ದಯಾನಂದ ಸಿ.ಎಚ್,ಕೇಶವ ಜೆ,ನಾಗಪ್ಪ ಗೌಡ ಕೆ,ಪೊನ್ನಪ್ಪ ಪಿ,ಚಿದಾನಂದ ಕೆ,ಮಮತಾ ಎಂ.ಎಸ್,ಶ್ರೀಮತಿ ರವಿಕಲಾ ಎನ್,ಶ್ರೀಮತಿ ರೇವತಿ ಬಿ.ಉಪಸ್ಥಿತರಿದ್ದರು. ಶ್ರೀಮತಿ ಲೀಲಾವತಿ ಕೆ.ಪ್ರಾರ್ಥಿಸಿ,ನಿರ್ದೇಶಕಿ ಮಮತ ಎಂ.ಎಸ್.ಸ್ವಾಗತಿಸಿ,ಕಾರ್ಯದರ್ಶಿ ವಂದಿಸಿದರು.ಹಾಲು ಪರೀಕ್ಷಕಿ ಲತಾ ಕುಮಾರಿ ಸಹಕರಿಸಿದರು.