ಬಾಳುಗೋಡು ಬೆಟ್ಟುಮಕ್ಕಿ ಪೊಯ್ಕೆಗದ್ದೆ ಶ್ರೀ ದೇವಿಯ ಸನ್ನಿಧಿಯಲ್ಲಿ 41ನೇ ವರ್ಷದ ನವರಾತ್ರಿಪೂಜೆ

0

ಬಾಳುಗೋಡು ಬೆಟ್ಟುಮಕ್ಕಿ ಪೊಯ್ಕೆಗದ್ದೆ ಶ್ರೀ ದೇವಿಯ ಸನ್ನಿಧಿಯಲ್ಲಿ 41ನೇ ವರ್ಷದ ನವರಾತ್ರಿ ಪೂಜಾ ಕಾರ್ಯಕ್ರಮ
ಅ.11 ರಿಂದ ಅ. 21 ತನಕ ನಡೆಯಲಿದೆ.

ಅ.11 ಬೆಳಿಗ್ಗೆ ಗಣಹೋಮ, ಶ್ರೀ ದೇವಿಯ ಗದ್ದಿಗೆ ಏರುವುದು ಕಾರ್ಯಕ್ರಮ ನಡೆದು ನಾಗತಂಬಿಲ ನಡೆಯಲಿದೆ. ರಾತ್ರಿ ದೇವಿ ಪೂಜೆ ನಡೆದು ಅನ್ನಸಂತರ್ಪಣೆ ನಡೆಯಲಿದೆ. ‌ಬಳಿಕ ದಿನಂಪ್ರತಿ ಪೂಜೆ ನಡೆದು ಅ.21ರ ಬೆಳಿಗ್ಗೆ ಗಂಟೆ 10ರ ನಂತರ ತಡೆಕಾಯಿ ಕೊಡುವ ಕಾರ್ಯಕ್ರಮ ನಡೆಯಲಿದೆ ಅಂದು ಮಧ್ಯಾಹ್ನ ಅನ್ನಸಂತರ್ಪಣೆ ನಡೆದು ರಾತ್ರಿ ದುರ್ಗಾಪೂಜೆ ಪೂಜೆ ನಡೆಯಲಿದೆ. ನಿತ್ಯ ಭಜನಾ ಕಾರ್ಯಕ್ರಮ ಅನ್ನಸಂತರ್ಪಣೆ ನಡೆಯಲಿದ್ದು ಭಕ್ತಾದಿಗಳು ಭಾಗವಹಿಸುವಂತೆ ಕೋರಲಾಗಿದೆ.