ಅ. 11-20: ಕುಂಜತ್ತಾಡಿ ಶ್ರೀ ವನದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ನವರಾತ್ರಿ ಉತ್ಸವ

0

ಬಳ್ಪ ಗ್ರಾಮದ ಕುಂಜತ್ತಾಡಿ ಶ್ರೀ ವನದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ನವರಾತ್ರಿ ಉತ್ಸವ ಅ. 11ರಿಂದ ಅ. 20ರ ತನಕ ವಿಜೃಂಭಣೆಯಿಂದ ಜರಗಲಿದೆ.
ಅ. 11ರಂದು ಬೆಳಿಗ್ಗೆ ಗಂಟೆ 7.00ರಿಂದ ದ್ವಾದಶ ನಾರಿಕೇಳ ಗಣಹೋಮ ಮತ್ತು
ದೇವಳದ ಅರ್ಚಕರಾದ ರಘುರಾಮ ಅಮ್ಮಣ್ಣಾಯರ ಸೇವಾರ್ಥವಾಗಿ ಶ್ರೀದೇವಿಗೆ ನೂತನ ಕವಚ ಸಮರ್ಪಣೆ
ಬೆಳಿಗ್ಗೆ ಗಂಟೆ 9.00 ರಿಂದ ಲೋಕಕಲ್ಯಾಣಾರ್ಥವಾಗಿ ಚಂಡಿಕಾ ಮಹಾಯಾಗ
ಮಧ್ಯಾಹ್ನ ಪೂರ್ಣಾಹುತಿ ನಡೆಯಲಿದೆ. ಬೆಳಿಗ್ಗೆ 9.00ರಿಂದ ಮೇದಿನಿ ನಗ್ಲೆ ನಿವೇದಿತಾ ಗೋಖಲೆಯವರಿಂದ ವೀಣಾವಾದನ ನಡೆಯಲಿದೆ.
ಅ.‌14ರಂದು‌ ಸಂಜೆ 5.00 ಗಂಟೆಯಿಂದ ಆಶ್ಲೇಷ ಬಲಿ, ಅ. 15ರಂದು ಬೆಳಿಗ್ಗೆ 9.00ರಿಂದ ವನದುರ್ಗಾ ಹೋಮ, ಅ.‌ 16ರಂದು ಬೆಳಿಗ್ಗೆ ನಾಗದೇವರಿಗೆ ಪಂಚಾಮೃತ ಅಭಿಷೇಕ, ತಂಬಿಲ ನಡೆಯಲಿದೆ. ಅ. 20ರಂದು ಬೆಳಿಗ್ಗೆ 7.30ರಿಂದ ಖದಿರು ಕಟ್ಟುವುದು, ಮಧ್ಯಾಹ್ನ ಮಹಾನವಮಿ ಮಹೋತ್ಸವ, ನವಾನ್ನ ಭೋಜನ, ಅಕ್ಷರಾಭ್ಯಾಸ ನಡೆಯಲಿದೆ. ರಾತ್ರಿ 7.00ರಿಂದ ಸಾಮೂಹಿಕ ದುರ್ಗಾ ನಮಸ್ಕಾರ ಪೂಜೆ ನಡೆಯಲಿದೆ. ನವರಾತ್ರಿಯ ಪ್ರತಿದಿನ ಮಧ್ಯಾಹ್ನ ಮತ್ತು ರಾತ್ರಿ ಮಹಾಪೂಜೆ, ಪ್ರಸಾದ ವಿತರಣೆ ಬಳಿಕ ಅನ್ನಸಂತರ್ಪಣೆ ನಡೆಯಲಿದೆ.