ಬೆಳ್ಳಾರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ ಬೆಳೆವಿಮೆ ಬಗ್ಗೆ ಕೃಷಿಕರ ಸಭೆ

0

ಬೆಳ್ಳಾರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ ಕೃಷಿಕರಿಗೆ ಬೆಳೆ ವಿಮೆ ಕಡಿಮೆ ಪಾವತಿಯಾದ ಬಗ್ಗೆ ಕೃಷಿಕರ ಸಭೆಯು ಸಂಘದ ಅಧ್ಯಕ್ಷರಾದ ಆರ್. ಕೆ.ಭಟ್ ಕುರುಂಬುಡೇಲು ಇವರ ಅಧ್ಯಕ್ಷತೆಯಲ್ಲಿ ಅ.06 ರಂದು ಸಹಕಾರಿ ಸಂಘದ ಸಭಾಂಗಣದಲ್ಲಿ ನಡೆಯಿತು.
ಕಳೆದ ವರ್ಷದಿಂದಲೂ ಕಡಿಮೆ ಜಮೆಯಾದ ಬಗ್ಗೆ ಸಭೆ ನಡೆದಿದ್ದು ಸದಸ್ಯರ ಸಲಹೆಯ ಮೇರೆಗೆ ಮುಂದೆ ಈ ರೀತಿಯಾಗಿ ಸಮಸ್ಯೆಗಳು ಆಗಬಾರದು ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಹಾಗೂ ವಿಮೆ ಕಂಪನಿಗೆ ಹಾಗೂ ಮಳೆ ಮಾಪನವನ್ನು ಸರಿಪಡಿಸುವುದರ ಕುರಿತು ನಿರ್ಣಯವನ್ನು ಮಾಡಲಾಯಿತು.
ಸುಳ್ಯ ತಹಶೀಲ್ದಾರ್,ಜಿಲ್ಲಾಧಿಕಾರಿ,ಶಾಸಕರು,ತೋಟಗಾರಿಕ ಉಪನಿರ್ದೇಶಕರು ಹಾಗೂ ಸರಕಾರಕ್ಕೆ ಮನವಿ ನೀಡಲು ತೀರ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ಶ್ರೀಮತಿ ಸುನಂದ ಐ.ಆಳ್ವ, ಉಪಾಧ್ಯಕ್ಷ ಪದ್ಮನಾಭ ಶೆಟ್ಟಿ ಪೆರುವಾಜೆ,ನಿರ್ದೆಶಕರಾದ ಶ್ರೀಮತಿ ವನಿತಾ ಸಾರಕೆರೆ,ಶ್ರೀಮತಿ ಭಾರತಿ, ಭಾಸ್ಕರ ನೆಟ್ಟಾರು,ವಾಸುದೇವ ಐಗಳಮಕ್ಕಿ ಹಾಗೂ ಮಾಜಿ ಅಧ್ಯಕ್ಷರು, ಸದಸ್ಯರು ,ಕೃಷಿಕರು ಉಪಸ್ಥಿತರಿದ್ದರು.