ಸುಳ್ಯ ಕೆ.ವಿ.ಜಿ. ಕಾನೂನು ಕಾಲೇಜು, ಸುಳ್ಯ ಇದರ ವತಿಯಿಂದ ಪ್ರಥಮ ವರ್ಷದ ಎಲ್.ಎಲ್.ಬಿ. ಹಾಗೂ ಬಿ.ಎ., ಎಲ್.ಎಲ್.ಬಿ. ವಿದ್ಯಾರ್ಥಿಗಳಿಗಾಗಿ ಅಭಿಮುಖೀಕರಣ ಕಾರ್ಯಕ್ರಮವನ್ನು ಅಕ್ಟೋಬರ್ 8 ರಂದು ಕಾಲೇಜಿನ ಸಭಾಂಗಣದಲ್ಲಿ ಆಯೋಜಿಸಲಾಯಿತು.















ಕಾರ್ಯಕ್ರಮದಲ್ಲಿ ಅಕಾಡೆಮಿ ಆಫ್ ಲಿಬರಲ್ ಎಜುಕೇಶನ್ (ರಿ.), ಸುಳ್ಯದ ಅಧ್ಯಕ್ಷರಾದ ಡಾ. ಕೆ. ವಿ. ಚಿದಾನಂದ ಅವರು ಉಪಸ್ಥಿತರಿದ್ದರು. ಕಾಲೇಜಿನ ಪ್ರಾಂಶುಪಾಲರಾದ ಶ್ರೀಮತಿ ಟೀನಾ ಎಚ್. ಎಸ್. ಹಾಗೂ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿಯಾದ ಶ್ರೀಮತಿ ಕಲಾವತಿ ಎಮ್. ಅವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕಾಲೇಜಿನ ಪ್ರಾಂಶುಪಾಲರಾದ ಶ್ರೀಮತಿ ಟೀನಾ ಎಚ್. ಎಸ್. ಅವರು ಸ್ವಾಗತ ಭಾಷಣ ಮಾಡಿ, ಅಧ್ಯಕ್ಷರು, ಬೋಧಕ ವರ್ಗ ಹಾಗೂ ನೂತನ ವಿದ್ಯಾರ್ಥಿಗಳನ್ನು ಕಾರ್ಯಕ್ರಮಕ್ಕೆ ಆತ್ಮೀಯವಾಗಿ ಸ್ವಾಗತಿಸಿದರು.
ಸಹಾಯಕ ಪ್ರಾಧ್ಯಾಪಕರಾದ ಶ್ರೀಮತಿ ಕೃತಿಕಾ ಜೆ. ವೈಪನ ಅವರು ವಿದ್ಯಾರ್ಥಿಗಳಿಗೆ ಕಾಲೇಜಿನ ಪರಿಚಯವನ್ನು ನೀಡುವುದರ ಜೊತೆಗೆ ಕಾಲೇಜಿನ ನಿಯಮಗಳು, ಶಿಸ್ತು, ಶೈಕ್ಷಣಿಕ ಚಟುವಟಿಕೆಗಳು, ವಿದ್ಯಾರ್ಥಿಗಳ ಕರ್ತವ್ಯಗಳು ಹಾಗೂ ಪಾಲಿಸಬೇಕಾದ ಮಾರ್ಗಸೂಚಿಗಳ ಕುರಿತು ಮಾಹಿತಿ ನೀಡಿದರು.
ಅಭಿಮುಖೀಕರಣ ಕಾರ್ಯಕ್ರಮದ ಮೂಲಕ ನೂತನ ವಿದ್ಯಾರ್ಥಿಗಳಿಗೆ ಕಾಲೇಜಿನ ಶೈಕ್ಷಣಿಕ ವ್ಯವಸ್ಥೆ, ವಿವಿಧ ಚಟುವಟಿಕೆಗಳು, ವಿದ್ಯಾರ್ಥಿಗಳ ಜವಾಬ್ದಾರಿಗಳು ಹಾಗೂ ಕಾಲೇಜಿನಲ್ಲಿ ಪಾಲಿಸಬೇಕಾದ ನಿಯಮಗಳ ಕುರಿತು ಸಮಗ್ರ ಪರಿಚಯವನ್ನು ನೀಡಲಾಯಿತು.
ಕು. ಚಂದನಾ ಪಿ. ಎಸ್. ಅವರ ಪ್ರಾರ್ಥನಾ ಗೀತೆ ಹಾಡಿದರು . ಕಾಲೇಜಿನ ಅಧ್ಯಾಪಕರಾದ ಆಕಾಶ್ ಫಿಲಿಪ್ ಕಾರ್ಯಕ್ರಮ ನಿರೂಪಿಸಿದರು.







