ಸುಬ್ರಹ್ಮಣ್ಯದಲ್ಲಿ ನಡೆದ ಘಟನೆ
ದೃಶ್ಯ ಸಿಸಿ ಕ್ಯಾಮರದಲ್ಲಿ ಸೆರೆ














ಸುಬ್ರಹ್ಮಣ್ಯ ದೇವಾಲಯದ ಬಳಿಯ ರಾಜಗೋಪುರದ ಎದುರು ಭಾಗದಲ್ಲಿ ಯಾತ್ರಿಕರಿಗಾಗಿರುವ ಸಭಾಂಗಣದಲ್ಲಿ ಮಲಗಿದ್ದ ವ್ಯಕ್ತಿಯೊಬ್ಬರ ಮೊಬೈಲ್ ನ್ನು ಯುವಕನೊಬ್ಬ ಎಗರಿಸಿದ ಘಟನೆ ಇಂದು ವರದಿಯಾಗಿದೆ.
ಸಭಾಂಗಣದಲ್ಲಿ ಮಲಗಿದ್ದ ಯಾತ್ರಾರ್ಥಿಯೊಬ್ಬರ ಹತ್ತಿರ ಯುವಕನೊಬ್ಬ ಹೋಗಿ ಮಲಗಿ ಅವರ ಹತ್ತಿರದಲ್ಲೇ ಇರಿಸಲಾಗಿದ್ದ ಮೊಬೈಲ್ ನ್ನು ಎಗರಿಸಿ ಮತ್ತೆ ಅಲ್ಲಿಂದ ಎದ್ದು ಹೋದ ಘಟನೆ ಸಿಸಿ ಕ್ಯಾಮಾರದಲ್ಲಿ ಸೆರೆಯಾಗಿದ್ದು ಈ ಬಗ್ಗೆ ಸುಬ್ರಹ್ಮಣ್ಯ ಠಾಣೆಗೆ ಮಾಹಿತಿ ನೀಡಲಾಗಿದ್ದು ಆ ವ್ಯಕ್ತಿ ಕಂಡು ಬಂದಲ್ಲಿ ಠಾಣೆಗೆ ಮಾಹಿತಿ ನೀಡುವಂತೆ ಕೋರಲಾಗಿದೆ.







