ಹರಿಹರ ಪಲ್ಲತ್ತಡ್ಕ : ಜೇನು ಕೃಷಿ ತರಬೇತಿ ಕಾರ್ಯಕ್ರಮ

0

ತೋಟಗಾರಿಕೆ ಇಲಾಖೆ ಸುಳ್ಯ, ಇದರ ವತಿಯಿಂದ ಕೊಲ್ಲಮೊಗ್ರು ಹರಿಹರ ಪ್ರಾ ಕೃ ಪ ಸ ಸಂಘ ಹರಿಹರ ಪಲ್ಲತ್ತಡ್ಕ ಇವರ ಸಹಯೋಗದೊಂದಿಗೆ ಜೇನು ಕೃಷಿ ತರಬೇತಿ ಕಾರ್ಯಕ್ರಮವು ಅ‌ 8. ರಂದು ಸಂಘದ ಪ್ರದಾನ ಕಚೇರಿ ಯಲ್ಲಿ ಉದ್ಘಾಟನೆ ಗೊಂಡಿತು..

ನಿವೃತ್ತ ಪ್ರಾಂಶುಪಾಲರು, ಪ್ರಗತಿಪರ ಕೃಷಿಕರಾದ ಪ್ರಭಾಕರ ಕಿರಿಭಾಗರವರು ಕಾರ್ಯಕ್ರಮ ಉದ್ಘಾಟಿಸಿ ಶುಭಹಾರೈಸಿದರು.

.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷರಾದ ಡಾಲ್ ಸೋಮಶೇಖರ ಕಟ್ಟೆಮನೆ ರವರು ವಹಿಸಿದ್ದರು.
ವೇದಿಕೆಯಲ್ಲಿ ಸುಳ್ಯ ತೋಟಗಾರಿಕ ನ
ಹಿರಿಯ ಸಹಾಯಕ ಪ್ರಮೋದ್ ಸಿ ಯಂ , ಸಂಪನ್ಮೂಲ ವ್ಯಕ್ತಿಗಳಾದ ವಿವೇಕ್ ಪಡ್ಪು, ಕೀರ್ತನ್ ಪೈಲಾರು, ಅಜೇಯ ಪೊಯ್ಯಮಜಲು, ಸಂಘದ ಉಪಾಧ್ಯಕ್ಷರಾದ ಗಣೇಶ್ ಭಟ್, ಮುಖ್ಯ ಕಾರ್ಯನಿರ್ವಹಣಾದಿಕಾರಿ ಶ್ರೀ ಮತಿ ತೀರ್ಥಕುಮಾರಿ ವೈ, ಸಹಾಯಕ ತೋಟಗಾರಿಕ ಅಧಿಕಾರಿ ಡಾ ವಿಜೇತ್ ಉಪಸ್ಥಿತರಿದ್ದರು.

ಗಣೇಶ್ ಭಟ್ ಸ್ವಾಗತಿಸಿ, ಡಾ.ವಿಜೇತ್ ಎಸ್ ಧನ್ಯವಾದಗೈದರು. ಗೌರೀಶ್ ಮಲ್ಲಾಜೆ ಕಾರ್ಯಕ್ರಮ ನಿರೂಪಿಸಿದರು.