ನಾಲ್ಕೂರು ಗ್ರಾಮದ ಮರಕತ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಅ. 11 ರಿಂದ 21 ರವರೆಗೆ ನವರಾತ್ರಿ ಉತ್ಸವವು ವಿವಿಧ ಧಾರ್ಮಿಕ ಕ್ರಿಯಾದಿಗಳೊಂದಿಗೆ ನಡೆಯಲಿದೆ.














ಅ. 11 ರಂದು ಬೆಳಿಗ್ಗೆ ಗಣಪತಿ ಹವನ, ಮಹಾಪೂಜೆ, ಪ್ರಸಾದ ವಿತರಣೆ ನಡೆದು ರಾತ್ರಿ 8ಕ್ಕೆ ಶ್ರೀದೇವಿಗೆ ಮಹಾಪೂಜೆ ನಡೆದು ಪ್ರಸಾದ ವಿತರಣೆ ನಡೆಯಲಿದೆ.
ಅ.15 ರಂದು ಲಲಿತ ಪಂಚಮಿ ಪ್ರಯುಕ್ತ ಬೆಳಿಗ್ಗೆ ಮಹಾಪೂಜೆ, ಪ್ರಸಾದ ವಿತರಣೆ ಸಾಮೂಹಿಕ ಚಂಡಿಕಾ ಹವನ ಕುಂಕುಮಾರ್ಚನೆ ನಡೆದು ಮಹಾಪೂಜೆ ನಂತರ ಪ್ರಸಾದ ವಿತರಣೆ ನಡೆಯಲಿದೆ.
ಅ. 17ರಂದು ತುಲಾ ಸಂಕ್ರಮಣ ಪ್ರಯುಕ್ತ ಶ್ರೀದೇವಿಗೆ ಬೆಳಿಗ್ಗೆ ಮಹಾಪೂಜೆ, ಪ್ರಸಾದ ವಿತರಣೆ ಹಾಗೂ ಮಧ್ಯಾಹ್ನ ಸಂಕ್ರಮಣ ವಿಶೇಷ ಪೂಜೆ ನಡೆಯಲಿದೆ.
ಅ. 18ರಂದು ಶಾರದಾ ಪೂಜಾ ಆರಂಭವಾಗಿ ಮಹಾಪೂಜೆ, ಮಕ್ಕಳಿಗೆ ವಿದ್ಯಾರಂಭ, ಮಧ್ಯಾಹ್ನ ಮಹಾಪೂಜೆ ನಡೆದು ಪ್ರಸಾದ ವಿತರಣೆ ನಡೆಯಲಿದೆ.
ಅ.19 ರಂದು ದುರ್ಗಾಷ್ಟಮಿ ಪ್ರಯುಕ್ತ ಶ್ರೀದೇವಿಗೆ ಮಹಾಪೂಜೆ, ವಿದ್ಯಾರಂಭ ನಡೆಯಲಿದೆ. ಅ. 20ರಂದು ಮಹಾನವಮಿ ಪ್ರಯುಕ್ತ ಶ್ರೀ ದೇವಿಗೆ ಮಹಾಪೂಜೆ, ರಾತ್ರಿ ಮಹಾಪೂಜೆ ಹಾಗೂ ವಿಶೇಷ ರಂಗಪೂಜೆ, ವಾಹನ ಪೂಜೆ ನಡೆಯಲಿದೆ.
ಅ. 21ರಂದು ವಿಜಯದಶಮಿ ಪ್ರಯುಕ್ತ ದೇವಳದಲ್ಲಿ ಮಹಾಪೂಜೆ ವಿದ್ಯಾರಂಭ, ಕದಿರುಪೂಜೆ ನಡೆದು ಶಮೀ ಪೂಜೆ ನಡೆಯಲಿದೆ. ಮಧ್ಯಾಹ್ನ ನವಾನ್ನ ಭೋಜನ ನಡೆಯಲಿದೆ. ಶ್ರೀ ದೇವಳದಲ್ಲಿ ನವರಾತ್ರಿ ಪ್ರಾರಂಭ ದಿನದಿಂದ ಬೆಳಿಗ್ಗೆ ಮತ್ತು ಮಧ್ಯಾಹ್ನ ರಾತ್ರಿ ವಾಹನ ಪೂಜೆ ಇರುತ್ತದೆ. ವಿಶೇಷ ಕಾರ್ಯಕ್ರಮವಾಗಿ ನೃತ್ಯ ಸಾರಂಗ ಕಲಾ ಕುಟೀರ ಗುತ್ತಿಗಾರು ಇಲ್ಲಿನ ಶ್ರೀಮತಿ ರಚಿತಾ ಗೌಡ ಮತ್ತು ಇವರ ಶಿಷ್ಯರಿಂದ ಭರತನಾಟ್ಯ ಕಾರ್ಯಕ್ರಮ ನಡೆಯಲಿದೆ.
ಪ್ರತಿ ದಿನ ಆಗಮಿಸುವ ಭಕ್ತಾದಿಗಳಿಗೆ ಮಧ್ಯಾಹ್ನ ಹಾಗೂ ರಾತ್ರಿ ಅನ್ನಸಂತರ್ಪಣೆ ನಡೆಯಲಿದೆಮ್ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ, ಶ್ರೀ ದೇವಿಯ ಅನುಗ್ರಹಕ್ಕೆ ಪಾತ್ರರಾಗಬೇಕಾಗಿ ದೇವಸ್ಥಾನದ ವ್ಯವಸ್ಥಾಪನ ಸಮಿತಿಯವರು ತಿಳಿಸಿದ್ದಾರೆ.







