ಬೆಂಗಳೂರು ಬಂಟರ ಸಂಘದ ಕಾನೂನು ಘಟಕದ‌ ಸಂಚಾಲಕರಾಗಿ ಜಯಪ್ರಕಾಶ್ ರೈ ಕನ್ನೆಜಾಲು ಆಯ್ಕೆ

0

ಬೆಂಗಳೂರು ಬಂಟರ ಸಂಘದ ಕಾನೂನು ಘಟಕದ ಸಂಚಾಲಕರಾಗಿ ಹೈಕೋರ್ಟ್ ನ್ಯಾಯವಾದಿಯಾಗಿರುವ ಜಯಪ್ರಕಾಶ್ ರೈ ಕನ್ನೆಜಾಲು ಆಯ್ಕೆಯಾಗಿದ್ದಾರೆ.

ಅ.9ರಂದು ಬೆಂಗಳೂರಿನಲ್ಲಿ ಬಂಟರ ಸಂಘದ ಅಧ್ಯಕ್ಷರಾದ ದೀಪಕ್ ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ಕಾನೂನು ಘಟಕದ ಪದಾಧಿಕಾರಿಗಳ ಆಯ್ಕೆ ನಡೆಯಿತು.

ಪೆರುವಾಜೆ ಗ್ರಾಮದ‌ ಕನ್ನೆಜಾಲು ದಿ.ನಾರಾಯಣ ರೈ -ಶ್ರೀಮತಿ ಜಯಂತಿ ದಂಪತಿಗಳ ಪುತ್ರರಾದ ಜಯಪ್ರಕಾಶ್ ರೈಯವರು ಪ್ರಾಥಮಿ ವಿದ್ಯಾಭ್ಯಾಸವನ್ನು ಸ.ಹಿ.ಪ್ರಾ.ಶಾಲೆ ಮುಕ್ಕೂರು ಪೆರುವಾಜೆಯಲ್ಲಿ ಪಡೆದರು. ಪ್ರೌಢ ಹಾಗೂ ಪದವಿ ಪೂರ್ವ ವಿದ್ಯಾಭ್ಯಾಸವನ್ನು ಕೆಯ್ಯೂರು‌ ಜೂನಿಯರ್ ಕಾಲೇಜಿನಲ್ಲಿ ಹಾಗೂ ಪದವಿ ವಿದ್ಯಾಭ್ಯಾಸವನ್ನು ಪೆರುವಾಜೆ ಡಾ.ಶಿವರಾಮ ಕಾರಂತ ಪ್ರಥಮ ದರ್ಜೆ ಕಾಲೇಜಿನಲ್ಲಿ ಪಡೆದು, ಸುಳ್ಯದ ಕೆವಿಜಿ ಕಾನೂನು ಕಾಲೇಜಿನಲ್ಲಿ ಕಾನೂನು ವಿದ್ಯಾಭ್ಯಾಸ ಪೂರ್ತಿಗೊಳಿಸಿದ್ದರು.

ಬಳಿಕ ಸುಳ್ಯದ‌ ನ್ಯಾಯವಾದಿ ನಾರಾಯಣ ಕೆ.ಯವರ ಜತೆ ವಕೀಲರ ವೃತ್ತಿ ಆರಂಭಿಸಿದ ಇವರು, 2010ರಿಂದ ಬೆಂಗಳೂರಿನಲ್ಲಿ ನ್ಯಾಯವಾದಿಯಾಗಿದ್ದಾರೆ. ಪ್ರಸ್ತುತ ಬೆಂಗಳೂರಿನ ಮಲ್ಲೇಶ್ವರಂನಲ್ಲಿ ನೆಲೆಸಿರುವ ಇವರು ಯುವ ವಕೀಲರ ಸಂಘದ ರಾಜ್ಯ ಉಪಾಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ.