













ಗುತ್ತಿಗಾರಿನಲ್ಲಿ ನಿಲ್ಲಿಸಿದ್ದ ಕಾರೊಂದು ಹಿಂದೆ ಸರಿದು ನಿಲ್ಲಿಸಿದ್ದ ಇಚರ್ ಲಾರಿಗೆ ಗುದ್ದಿ ವ್ಯಕ್ತಿ ಗಾಯಗೊಂಡ ಘಟನೆ ಅ.16 ರಂದು ನಡೆದಿದೆ.
ಗುತ್ತಿಗಾರಿನ ದೇವಿ ಸಿಟಿ ಕಾಂಪ್ಲೆಕ್ಸ್ ನ ಎದುರು ಮಡಿಕೇರಿ ಕಡೆಯವರು ಕಾರು ನಿಲ್ಲಿಸಿ ತೆರಳಿದ್ದ ಸಂದರ್ಭ ಕಾರು ಹಿಮ್ಮುಖ ಚಲಿಸಿ ರಸ್ತೆ ಬದಿ ನಿಲ್ಲಿಸಿದ್ದ ಲೈನ್ ಸೇಲ್ ವಾಹನಕ್ಕೆ ಗುದ್ದಿದೆ. ಲೈನ್ ಸೇಲ್ ವಾಹನದಿಂದ ಯುವಕನೊಬ್ಬ ಸಾಮಾಗ್ರಿ ತೆಗೆಯಲು ತಯಾರಿ ನಡೆಸುತಿದ್ದಾಗ ಅವನಿಗೂ ಗುದ್ದಿ ಆತನ ಕಾಲಿಗೆ ಗಾಯವಾಗಿರುವುದಾಗಿ ತಿಳಿದು ಬಂದಿದೆ. ಕಾರು ಕೂಡ ನಜ್ಜುಗುಜ್ಜಾಗಿದ್ದು ಪ್ರಕರಣವನ್ನು ಮಾತುಕತೆಯಲ್ಲಿ ಮುಗಿಸಲಾಗಿರುವುದಾಗಿ ತಿಳಿದು ಬಂದಿದೆ.






