ಸುಳ್ಯದ ಸ್ವರ್ಣಶ್ರೀ ಸೌಹಾರ್ದ ಕೋ-ಆಪರೇಟಿವ್ ಸೊಸೈಟಿಯಲ್ಲಿ ಠೇವಣಿಗಳಿಗೆ ವಿಶೇಷ ಬಡ್ಡಿದರ: ಸ್ವರ್ಣ ನಿಧಿ ಠೇವಣಿ (FD)1 ವರ್ಷಕ್ಕೆ ಶೇ.12

0

ಸುಳ್ಯದ ರಥಬೀದಿಯ ವಿನಾಯಕ ಬಿಲ್ಡಿಂಗ್ ನ ಮೊದಲನೇ ಮಹಡಿಯಲ್ಲಿ ಕಾರ್ಯಾಚರಿಸುತ್ತಿರುವ ಸ್ವರ್ಣಶ್ರೀ ಸೌಹಾರ್ದ ಕೋ-ಆಪರೇಟಿವ್‌ ಸೊಸೈಟಿಯು ಗ್ರಾಹಕರಿಗೆ ಬಿಗ್ ಆಫರ್ ನೀಡುತ್ತಿದೆ. ಪ್ರಗತಿಯ ಪಥದಲ್ಲಿ ಮುನ್ನಡೆ ಯುತ್ತಿರುವ ಸ್ವರ್ಣಶ್ರೀ ಸೌಹಾರ್ದ ಸಹಕಾರಿ ಸಂಘವು ನವರಾತ್ರಿಯ ಹಬ್ಬದ ಪ್ರಯುಕ್ತ ಅಕ್ಕೋಬರ್ 31ರವರೆಗೆ ಇರಿಸಲಾಗುವ ಹೊಸ ಠೇವಣಿಗಳಿಗೆ ವಿಶೇಷ ಬಡ್ಡಿದರ ನೀಡಲು ತೀರ್ಮಾನಿಸಿದೆ. ಸ್ವರ್ಣನಿಧಿ ಠೇವಣಿ(FD)ಗೆ ಹಿರಿಯ ನಾಗರಿಕರಿಗೆ 12%, ಜನಸಾಮಾನ್ಯರಿಗೆ 11.50% ಮತ್ತು ಸ್ವರ್ಣಧಾರ ಠೇವಣಿ(RD)ಗೆ ಒಂದು ವರ್ಷ ಮತ್ತು ಮೇಲ್ಪಟ್ಟು 11% ನೀಡಲಾಗುತ್ತದೆ. ಅಲ್ಲದೆ ರೂ. 1.00 ಲಕ್ಷ ಮೇಲ್ಪಟ್ಟು ಠೇವಣಿ ಇಟ್ಟವರಿಗೆ ಉಚಿತ ಬೆಳ್ಳಿ ನಾಣ್ಯ ನೀಡಲಾಗುವುದು. ಸಹಕಾರಿಯಲ್ಲಿ ಚಿನ್ನಾಭರಣ ಅಡವು ಸಾಲಗಳನ್ನು ನೀಡಲಾಗುತ್ತಿದ್ದು ಗ್ರಾಂ ಒಂದಕ್ಕೆ ಅತ್ಯಧಿಕ ದರದಲ್ಲಿ ಸೇವಾ ಶುಲ್ಕ ರಹಿತವಾಗಿ ಕಡಿಮೆ ಬಡ್ಡಿ ದರದಲ್ಲಿ ನೀಡಲಾಗುತ್ತಿದೆ. ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಎಂದು ಸಂಸ್ಥೆಯ ಆಡಳಿತ ಮಂಡಳಿಯವರು ತಿಳಿಸಿದ್ದಾರೆ.