ಮಡಪ್ಪಾಡಿ : ದೇವಿಪ್ರಸಾದ್ ಕಾಂಪ್ಲೆಕ್ಸ್ ನಲ್ಲಿ 38ನೇ ವರ್ಷದ ಆಯುಧ ಪೂಜೆ

0

ಮಡಪ್ಪಾಡಿಯ ದೇವಿಪ್ರಸಾದ್ ಕಾಂಪ್ಲೆಕ್ಸ್ ನಲ್ಲಿ ಪಿ. ಸಿ. ಜಯರಾಮ ರವರ ನೇತೃತ್ವದಲ್ಲಿ 38ನೇ ವರ್ಷದ ಆಯುಧ ಪೂಜೆ ನಡೆಯಿತು.

ಶ್ರೀದೇವಿಗೆ ಪೂಜಾ ಕಾರ್ಯಕ್ರಮ ನಡೆದು, ವಾಹನ ಪೂಜೆ ನಡೆಯಿತು. ಆ ಬಳಿಕ ಮಹಾಪೂಜೆ ನಡೆದು ಪ್ರಸಾದ ವಿತರಣೆ ನಡೆಯಿತು.

ಈ ಸಂದರ್ಭದಲ್ಲಿ ಕಾಂಪ್ಲೆಕ್ಸ್ ಮಾಲಕರಾದ ಪಿ. ಸಿ. ಜಯರಾಮ, ಪ್ರಮುಖರಾದ ಮಿತ್ರದೇವ ಮಡಪ್ಪಾಡಿ, ಸೋಮಶೇಖರ ಕೇವಳ, ಎನ್. ಟಿ. ಹೊನ್ನಪ್ಪ, ಅಜಯ್ ವಾಲ್ತಾಜೆ, ಸುರೇಶ್ ಮಡಪ್ಪಾಡಿ, ಗೋಪಾಲಕೃಷ್ಣ ಮಡಪ್ಪಾಡಿ, ಪೇರಪ್ಪ ಮಲೆ, ಯತಿಂದ್ರನಾಥ ಪಾಲ್ತಾಡು, ಶ್ರೀಮತಿ ವಸಂತಿ ಕೊಡಪಾಲ, ಭೋಜಪ್ಪ ಪೈಲೂರು, ವಾಸುದೇವ ನಡುಬೆಟ್ಟು, ವಿನಯ ಹಾಡಿಕಲ್ಲು ಮತ್ತಿತರರಿದ್ದರು.