ಗ್ರಂಥಾಲಯ ವಿಜ್ಞಾನ ಸರ್ಟಿಫಿಕೇಟ್ ಕೋರ್ಸ್ : ಅತ್ಯುತ್ತಮ ಶ್ರೇಣಿಯಲ್ಲಿ ತೇರ್ಗಡೆಗೊಂಡ ಗುತ್ತಿಗಾರು, ಹರಿಹರ ಮೇಲ್ವಿಚಾರಕರು

0

ಹರಿಹರ ಪಲ್ಲ ತಡ್ಕ ಮತ್ತು ಗುತ್ತಿಗಾರು ಅರಿವು ಕೇಂದ್ರದ ಮೇಲ್ವಿಚಾರಕರು ಶ್ರೀಮತಿ ಚಂದ್ರಿಕಾ ಕೆ ಮತ್ತು ಅಭಿಲಾಷ ಎಸ್ ಎಂ ಇವರು ಮಹಾತ್ಮ ಗಾಂಧಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ವಿಶ್ವವಿದ್ಯಾನಿಲಯ ಕೌಶಲ್ಯ ಭವನ ನಾಗಾವಿ, ಗದಗ ಇಲ್ಲಿ ಆರು ತಿಂಗಳ ಸರ್ಟಿಫಿಕೇಟ್ ಕೋರ್ಸ್ ನಲ್ಲಿ ಅತ್ತುತ್ತಮ ಶ್ರೇಣಿಯಲ್ಲಿ ತೇರ್ಗಡೆ ಹೊಂದಿರುತ್ತಾರೆ.

ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ , ತಾಲೂಕ್ ಪಂಚಾಯತ್ ಸುಳ್ಯ ನಿರ್ದೇಶನದೊಂದಿಗೆ ಗದಗ ಯುನಿವರ್ಸಿಟಿ ಪರೀಕ್ಷೆಗೆ ಹಾಜರಾಗಿರುತ್ತಾರೆ.
ದಕ್ಷಿಣ ಕನ್ನಡ ಜಿಲ್ಲೆ ಒಟ್ಟು 21 ಮೇಲ್ವಿಚಾರಕರು ಪರೀಕ್ಷೆ ಬರೆದಿರುತ್ತಾರೆ.