ಅ.20ರಂದು ಸುಳ್ಯದ ಸ್ನೇಹ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿ, ಶಿಕ್ಷಕರು ಹಾಗೂ ವಿದ್ಯಾರ್ಥಿಗಳಿಂದ ಜೇನು ಕೃಷಿ ಹಾಗೂ ಹೈನುಗಾರಿಕೆಯ ವೀಕ್ಷಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.














ದುಗ್ಗಲಡ್ಕದ ಕೊಯ್ಕುಳಿ ಪುರುಷೋತ್ತಮ ಅವರ ಮನೆಗೆ ಭೇಟಿ ನೀಡಿ ಅಲ್ಲಿ ಅವರು ನಡೆಸುತ್ತಿರುವ ಹೈನುಗಾರಿಕೆಯ ವೀಕ್ಷಿಸಿ, ಹೈನುಗಾರಿಕೆಯನ್ನು ನಡೆಸುವ ರೀತಿ, ಹಸುಗಳಿಗೆ ನೀಡುವ ಆಹಾರ, ಹಾಲು ಕರೆಯುವಿಕೆ, ಮಾರಾಟ ಅವುಗಳ ಲಾಭ – ನಷ್ಟ, ಸ್ವಚ್ಛತೆ, ಹಸುಗಳ ಆರೋಗ್ಯವನ್ನು ಕಾಪಾಡಿಕೊಳ್ಳುವ ರೀತಿಯ ಬಗ್ಗೆ ಮಾಹಿತಿ ತಿಳಿಸಲಾಯಿತು. ಹಾಗೆಯೆ ಜೇನು ಕೃಷಿಯಲ್ಲಿ ರ ಸಂಸಾರ ಪೆಟ್ಟಿಗೆ, ಜೇನುಪೆಟ್ಟಿಗೆ, ರಾಣಿ ನೊಣ ಅವುಗಳು ಜೇನು ತಯಾರಿಸುವ ರೀತಿಯ ಬಗ್ಗೆ ಮಾಹಿತಿಯನ್ನು ಪಡೆಯಲಾಯಿತು. ಅಲ್ಲದೆ ಸಾವಯವ ಸಹಜ ಕೃಷಿಗಳ ಬಗ್ಗೆ ಮಾಹಿತಿಯನ್ನು ಪಡೆಯಲಾಯಿತು. ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷರಾಗಿರುವ ಡಾ. ಚಂದ್ರಶೇಖರ ದಾಮ್ಲೆ, ಆಡಳಿತಾಧಿಕಾರಿ ಅಕ್ಷರ ದಾಮ್ಲೆ, ಶೈಕ್ಷಣಿಕ ನಿರ್ದೇಶಕಿ ಶ್ರೀಮತಿ ಜಯಲಕ್ಷ್ಮಿ ದಾಮ್ಲೆ ಮುಖ್ಯ ಶಿಕ್ಷಕ ಶ್ರೀ ದೇವಿಪ್ರಸಾದ್ ಜಿ ಸಿ, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದು ಮಾಹಿತಿಯನ್ನು ಪಡೆದುಕೊಂಡರು.









