ಸುಬ್ರಹ್ಮಣ್ಯ:ವನದುರ್ಗಾದೇವಿ ದೇವಸ್ಥಾನದಲ್ಲಿ ಶರನ್ನವರಾತ್ರಿ ಉತ್ಸವ ಸಂಪನ್ನ

0

ಶ್ರೀ ಸಂಪುಟ ನರಸಿಂಹಸ್ವಾಮಿ ಶ್ರೀ ಸುಬ್ರಹ್ಮಣ್ಯ ಮಠದ ಆಡಳಿತಕ್ಕೊಳಪಟ್ಟ ಶ್ರೀ ವನದುರ್ಗಾದೇವಿ ದೇವಸ್ಥಾನದಲ್ಲಿ
ಶರನ್ನವರಾತ್ರಿ ಉತ್ಸವ ಅ.11 ರಿಂದ ಅ.21 ರ ವರೆಗೆ ನಡೆಯಿತು.

ಪರಮಪೂಜ್ಯ ಶ್ರೀ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿಯವರ ಮಾರ್ಗದರ್ಶನದಲ್ಲಿ
ಶರನ್ನವರಾತ್ರಿಉತ್ಸವ ನಡೆಯಲಿದ್ದು ವಿಜ್ರಂಭಣೆಯಿಂದ ವೈಭವಪೋತವಾಗಿ ಜರಗಿತು.


ಅ. 11 ರಂದು ಶ್ರೀ ದುರ್ಗಾಂಬಾ ಯಕ್ಷಗಾನ ಮಂಡಳಿ, ತಡಂಬೈಲು ಸುರತ್ಕಲ್ – ಇವರಿಂದ
ಯಕ್ಷಗಾನ ತಾಳಮದ್ದಳೆ ನಡೆದು ಬಳಿಕ ಭಜನಾ ಕಾರ್ಯಕ್ರಮ ನಡೆದು. ಸಾಯಿಕಲಾ ಯಕ್ಷ ಬಳಗ, ಡಾ| ಶಿವರಾಮ ಕಾರಂತ ಬಾಲವನ ಪುತ್ತೂರು – ಇವರಿಂದ
ಯಕ್ಷಗಾನ – “ಶ್ವೇತಕುಮಾರ”
ಪ್ರಸಂಗ ನಡೆಯಿತು.


ಅ. 12 ರ ಸಂಜೆ
ಭಜನೆ, ಕಲಾನಿಕೇತನ ಡ್ಯಾನ್ಸ್ ಫೌಂಡೇಶನ್ ಕಲ್ಲಡ್ಕ ವಿದುಷಿ ವಿದ್ಯಾ ಮನೋಜ್ ಇವರ ಶಿಷ್ಠೆಯರಿಂದ “ಭರತನಾಟ್ಯ ಸಿಂಚನ” ನಡೆಯಿತು. ಅ. 13ರ
ಸಂಜೆ ಭಜನೆ, ರ ಶ್ರೀ ಯಜ್ಞೇಶ್ ಅಚಾರ್ ಮತ್ತು ಬಳಗ ಸುಬ್ರಹ್ಮಣ್ಯ ಇವರಿಂದ
“ಭಕ್ತಿ ಸಂಗೀತ” ನಡೆಯಿತು..
ಅ.14 ಸಂಜೆ ಭಜನೆ,
ಪ್ರಕೃತಿ ಕಲಾ ಟ್ರಸ್ಟ್ ಬಳ್ಳಾರಿ
ಶ್ರೀಮತಿ ರೇಣುಕಾ ಎ. ಮತ್ತು ತಂಡ ಇವರಿಂದ ಸಂಗೀತ ನಾಟ್ಯ ಸಂಜೆ ನಡೆಯಿತು. ಅ. 15 ರ ಸಂಜೆ ಭಜನೆ ರಾತ್ರಿ ಅಮ್ಮ ಡ್ರೀಮ್ಸ್ ಮೆಲೋಡಿಸ್‌, ಅಂಬಲಪಾಡಿ ಉಡುಪಿ ಇವರಿಂದ “ಭಕ್ತಿಗೀತೆ ಗಾಯನ” ನಡೆಯಿತು. ಅ.16 ರ ಸಂಜೆ ಭಜನೆ, ಶ್ರೀ ಮಹಾಲಿಂಗೇಶ್ವರ ಯಕ್ಷಗಾನ ಮಂಡಳಿ, ಪುತ್ತೂರು – ಇವರಿಂದ
ಯಕ್ಷಗಾನ ನೂತನ ಪ್ರಸಂಗ ನಡೆಯಿತು. ಅ. 17 ಸಂಜೆ ಭಜನೆ, ರಾತ್ರಿ ನೃತ್ಯೋಪಾಸನಾ ಕಲಾ ಅಕಾಡೆಮಿ ಪುತ್ತೂರು ಇದರ ಸುಬ್ರಹ್ಮಣ್ಯ ಶಾಖೆ ಪ್ರಸ್ತುತ ಪಡಿಸುವ “ನೃತ್ಯೋಹಂ” ನಡೆಯಿತು. ಅ. 18 ರಸಂಜೆ ಭಜನೆ ರಾತ್ರಿ ಸಂಸಾರ ಕಲಾವಿದೆರ್, ಬಲ್ನಾಡು ಪುತ್ತೂರು ಅಭಿನಯಿಸುವ ಭಕ್ತಿಪ್ರಧಾನ ಸಾಮಾಜಿಕ ಹಾಸ್ಯ ನಾಟಕ “ನಂಬಿಕೆದಾಯೆ” ನಡೆಯಿತು.
ಅ. 19 ರ ಸಂಜೆ
ಶ್ರೀ ಕಾರ್ತಿಕ್ ಸುಬ್ರಹ್ಮಣ್ಯ – ಇವರ ಸಂಯೋಜನೆಯಲ್ಲಿ ವಾದ್ಯಗೋಷ್ಠಿ,ರಾತ್ರಿ
ಡಿ ಸೋಲ್ಸ್ ಡ್ಯಾನ್ಸ್ ಕ್ರಿಯೆಟಿವ್ ಸುಬ್ರಹ್ಮಣ್ಯ ಕಲಾ ತಂಡದಿಂದ ನೃತ್ಯ ವೈಭವ ನಡೆಯಿತು.


ಅ. 20 ರ ಸಂಜೆ ಭಜನೆ ನಡೆದು ಬಳಿಕ
ತೆಂಕು-ಬಡಗಿನ ಸವ್ಯಸಾಚಿ ಭಾಗವತರಾದ ಶ್ರೀ ಸತ್ಯನಾರಾಯಣ ಪುಣಿಂಚಿತ್ತಾಯ ಇವರ ಸಂಯೋಜನೆಯಲ್ಲಿ
“ಗಾನ ವೈಭವ” ನಡೆಯಿತು..
ಅ.21 ರ ಮಧ್ಯಾಹ್ನ ಶ್ರೀ ಮಠದಲ್ಲಿ ನವಾನ್ನ ಭೋಜನ
ನಡೆಯಲಿದೆ. ಸಂಜೆ ಶ್ರೀ ಶಾರದಾಂಬಾ ಯಕ್ಷಗಾನ ಮಂಡಳಿ, ಬಿಳಿನೆಲೆ ಕೈಕಂಬ ಇವರಿಂದ ಯಕ್ಷಗಾನ ತಾಳಮದ್ದಳೆ ನಡೆಯಿತು.

ದಶ ದಿನವೂ ಸಾಂಸ್ಕೃತಿಕ ಕಾರ್ಯಕ್ರಮ

ಸುಬ್ರಹ್ಮಣ್ಯದಲ್ಲಿ ಮಠದ ವತಿಯಿಂದ ವನದುರ್ಗಾ ದೇವಿ ದೇವಾಲಯದಲ್ಲಿ ನಡೆಯಲ್ಪಡುವ ನವರಾತ್ರಿಯ ಕಾರ್ಯಕ್ರಮದಲ್ಲಿ ಹತ್ತು ದಿನವೂ ವಿವಿಧ ವೈವಿದ್ಯಮಯ ಕಾರ್ಯಕ್ರಮಗಳು ಆಯೋಜನೆ ಗೊಂಡವು. ಇದರಲ್ಲಿ ನಾಟಕ, ಗಾನ ವೈಭವ, ಭರತನಾಟ್ಯ, ತಾಳಮದ್ದಳೆ, ಯಕ್ಷಗಾನ, ಭಜನೆ, ಬಕ್ತಿ ಸಂಗೀತ ಇತ್ಯಾದಿಗಳಾಗಿವೆ. ಸಾದಾರಣವಾಗಿ ಮಠದ ಅಧೀನದಲ್ಲಿ ನಡೆಯುವ ನರಸಿಂಹ ಜಯಂತಿ, ಶ್ರೀಗಳ ಚಾತುರ್ಮಾಸ್ಯ ಕಾರ್ಯಕ್ರಮಗಳನ್ನು ವಾರಗಟ್ಟಳೆ ವಿವಿಧ ವೈವಿದ್ಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಆಯೋಜಿಲ್ಪಡುತ್ತಿದೆ.