ಕಲ್ಕುಡ ದೈವಸ್ಥಾನದಲ್ಲಿ ಆಮಂತ್ರಣ ಪತ್ರಿಕೆ ಬಿಡುಗಡೆ














ಸುಳ್ಯ ತಾಲೂಕು ಆಟೋ ಚಾಲಕರ ಬಿ.ಎಂ.ಎಸ್. ಸಂಯೋಜಿತ ಸಂಘದ ಆಶ್ರಯದಲ್ಲಿ ನ.28 ರಂದು ಚೆನ್ನಕೇಶವದೇವಸ್ಥಾನದಲ್ಲಿ ನಡೆಯಲಿರುವ ಸಾರ್ವಜನಿಕ ಶ್ರೀ ಶನೈಶ್ಚರ ಪೂಜೆಯ ಆಮಂತ್ರಣ ಪತ್ರಿಕೆಯನ್ನು ನಾವೂರಿನ ಕಲ್ಕುಡ ದೈವಸ್ಥಾನದಲ್ಲಿ ಅ.23 ರಂದು ಬಿಡುಗಡೆ ಮಾಡಲಾಯಿತು.
ಲೋಕಕಲ್ಯಾಣಾರ್ಥವಾಗಿ ಸಂಘದ ವತಿಯಿಂದ ನಡೆಯಲಿರುವ 27 ನೇ ವರ್ಷದ ಸಾರ್ವಜನಿಕ
ಶ್ರೀ ಶನೈಶ್ಚರ ಪೂಜಾ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ಕಲ್ಕುಡ ದೈವಸ್ಥಾನದ ಆಡಳಿತ ಧರ್ಮದರ್ಶಿ ಗಳಾದ ಪಿ.ಕೆ ಉಮೇಶ ರವರು ಬಿಡುಗಡೆಗೊಳಿಸಿ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಸಂಘದ ಹಿರಿಯ ಸದಸ್ಯರಾದ ವಿಶ್ವನಾಥ ಅಡ್ಪಾಂಗಾಯ, ನಂಜುಂಡ , ಕಲ್ಕುಡ ದೈವಸ್ಥಾನದ ಆಡಳಿತ ಮಂಡಳಿಯ ಸದಸ್ಯ ಭಾಸ್ಕರ ಐಡಿಯಲ್, ಪೂಜಾರಿ ತಿಮ್ಮಪ್ಪ ಗೌಡ ನಾವೂರು ಹಾಗೂ ಅಟೋ ಚಾಲಕರ ಸಂಘದ ಅಧ್ಯಕ್ಷ ಪ್ರಕಾಶ್ ಎಂಎಸ್ ,ಪ್ರ.ಕಾರ್ಯದರ್ಶಿ ನಾರಾಯಣ ಎಸ್. ಎಂ, ಕೋಶಾಧಿಕಾರಿ ರವಿ. ಎಸ್, ಸಂಘಟನಾ ಕಾರ್ಯದರ್ಶಿ ಸುಂದರ್ ಪೆರಾಜೆ, ಜತೆಕಾರ್ಯದರ್ಶಿ ಸುರೇಂದ್ರ ಕಾಮತ್, ನಿರ್ದೇಶಕರಾದ ಭಾನು ಪ್ರಕಾಶ್, ಹರೀಶ್ ನೆಕ್ರಾಜೆ, ಶಂಕರ, ವೇಣು ಗೋಪಾಲ ಕುರುಂಜಿಭಾಗ್,ಜನಾರ್ದನ ಶ್ರೀ ರಾಮಪೇಟೆ, ರೋಹಿತ್ ಗಾಂಧಿನಗರ, ಸುರೇಶ್ ಕುರುಂಜಿಬಾಗ್, ಜಗದೀಶ್ ಎನ್.ಆರ್, ಚಾಮಯ್ಯ ಮಾರ್ಕೆಟ್ ರಸ್ತೆ, ಲೋಕೇಶ್ ಬಸ್ ನಿಲ್ದಾಣ ಮತ್ತಿತರರು ಉಪಸ್ಥಿತರಿದ್ದರು.







