ಅಕ್ಷಯ್ ಕೆ.ಸಿ. ಯವರಿಂದ ಎಸ್.ಇ.ಎ ಸಂಗಮೋತ್ಸವದ ಉದ್ಘಾಟನೆ
ಕೆ.ವಿ.ಜಿ. ಕಾಲೇಜ್ ಆಫ್ ಎಂಜಿನಿಯರಿಂಗ್ ನ ಯು.ಎ.ಇ ಹಳೆ ವಿದ್ಯಾರ್ಥಿಗಳ ಘಟಕದ ವತಿಯಿಂದಆಯೋಜಿಸಲಾದ ಓಣಂ ಮತ್ತು ದಸರಾ ಸಂಭ್ರಮದ ಸಂಗಮೋತ್ಸವ -2026
ರ ಕಾರ್ಯಕ್ರಮ
ಅ. 11ರಂದು ಅಜ್ಮಾನ್ನ ಇಂಡಿಯನ್ ಇಂಟರ್ನ್ಯಾಷನಲ್ ಸ್ಕೂಲ್ನಲ್ಲಿ ನಡೆಯಿತು.















ಸಂಗಮೋತ್ಸವ 2026 ರ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಅಕ್ಷಯ್ ಕೆ.ಸಿ ಉದ್ಘಾಟಿಸಿದರು. ಚಿತ್ರ ನಟಿ ಶಮ್ನಾ ಕಾಸಿಮ್ ಸಂಗಮೋತ್ಸವದ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಸಮಾರಂಭದ ಅಧ್ಯಕ್ಷತೆಯನ್ನು
ಎಸ್.ಇ.ಎ- ಯು.ಎ.ಇ ಅಧ್ಯಕ್ಷ ರತೀಶ್ ವಹಿಸಿದ್ದರು.
ಮುಖ್ಯಅತಿಥಿಗಳಾಗಿ
ಸುಳ್ಯದ ಅಕಾಡೆಮಿ ಆಫ್ ಲಿಬರಲ್ ಎಜುಕೇಶನ್ನ ಪ್ರಧಾನ ಕಾರ್ಯದರ್ಶಿ ಅಕ್ಷಯ್ ಕೆ.ಸಿ, ಚಲನಚಿತ್ರ ನಟ ಅರುಣ್ ಕುಮಾರ್, ಎಸ್.ಇ.ಎ – ಯು.ಎ.ಇ ಜನರಲ್ ಸೆಕ್ರೆಟರಿ ಆಶಿಫ್ , ಖಜಾಂಜಿ ವಿಶಾಖ್ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ 40ನೇ ವಾರ್ಷಿಕೋತ್ಸವವನ್ನು ಆಚರಿಸುತ್ತಿರುವ ಕೆ.ವಿ.ಜಿ ಕಾಲೇಜ್ ಆಫ್ ಇಂಜಿನಿಯರಿಂಗ್ ಹಳೆ ವಿದ್ಯಾರ್ಥಿಗಳ ಪರವಾಗಿ ಅಕ್ಷಯ್ ಕೆ.ಸಿ ಯವರನ್ನು ಗೋಕುಲ್ ನಾಥ್ ಸನ್ಮಾನಿಸಿದರು. ನಟಿ ಶಮ್ನಾ ಕಾಸಿಮ್ ರವರನ್ನು ಶ್ರೀಮತಿ ಮಾನಸ ದಿಲೀಪ್ ಉಳುವಾರು ರವರು ಸನ್ಮಾನಿಸಿದರು.
ಯು.ಎ.ಇ ಯಲ್ಲಿ ನೆಲೆಸಿರುವ ಕಾಲೇಜಿನ ಮೊದಲ ಬ್ಯಾಚ್ನ ಹಳೆಯವಿದ್ಯಾರ್ಥಿಗಳನ್ನು ಈ ಸಂದರ್ಭದಲ್ಲಿ ಅಭಿನಂದಿಸಲಾಯಿತು.
ವೇದಿಕೆಯಲ್ಲಿ
ಉಪಾಧ್ಯಕ್ಷ ಜ್ಯೋತೀಸ್, ಜತೆ ಕಾರ್ಯದರ್ಶಿ ಯದುಕೃಷ್ಣನ್ ಉಪಸ್ಥಿತರಿದ್ದರು.
ಸಂಘದ ಜನರಲ್ ಕನ್ವೀನರ್ ನೌಫಲ್ ಸ್ವಾಗತಿಸಿದರು.
ಕನ್ವೀನರ್ ರಿಜು ವಂದಿಸಿದರು.
ಬಳಿಕ ಸದಸ್ಯರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು, ಮನರಂಜನಾತ್ಮಕ ಸ್ಪರ್ಧೆಗಳು ನಡೆಯಿತು.
ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನಗಳನ್ನು ವಿತರಿಸಲಾಯಿತು. ವಿಶೇಷವಾಗಿ ತಯಾರಿಸಿದ ವಿವಿಧ ಬಗೆಯ ಆಹಾರ ಖಾದ್ಯಗಳು ಸೇರಿದಂತೆ (ಓಣಂ ಸದ್ಯ). ಭೋಜನದ ವ್ಯವಸ್ಥೆ ಮಾಡಲಾಗಿತ್ತು.
ಸಂಘದ ವತಿಯಿಂದ ಆಯೋಜಿಸಿದ ಮೆಗಾ ರಾಫೆಲ್ ಡ್ರಾ ಮೂಲಕ iPhone 18 Pro Max, ಚಿನ್ನದ ನಾಣ್ಯ, Apple Watch ಸೇರಿದಂತೆ ಆಕರ್ಷಕವಾದ 15 ಬಹುಮಾನಗಳನ್ನು ವಿಜೇತರಿಗೆ ವಿತರಿಸಲಾಯಿತು.
ಸದಸ್ಯರಿಗಾಗಿ ಆಯೋಜಿಸಲಾದ ಸ್ನೇಹಪರ ಸ್ಪರ್ಧೆಗಳು, ವಾದ್ಯಮೇಳಗಳು, ಮುತ್ತುಕೊಡೆಗಳು ಹಾಗೂ ಸಾಂಪ್ರದಾಯಿಕ ಕೇರಳ–ಕರ್ನಾಟಕ ಶೈಲಿಯ ಉಡುಗೆ ತೊಟ್ಟು ಸದಸ್ಯರು ಭಾಗವಹಿಸಿದ ವರ್ಣರಂಜಿತ ಮೆರವಣಿಗೆ, ಮಹಿಳಾವಿಭಾಗದವರಿಂದ ಪ್ರಸ್ತುತಪಡಿಸಲಾದ ತಿರುವಾತಿರಕಳಿ, ಕನ್ನಡ ಜನಪದ ನೃತ್ಯ ಪ್ರೇಕ್ಷಕರ ಮನಸೂರೆಗೊಂಡಿತು.







