













ಸುಳ್ಯ ಕೆವಿಜಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ಬಯೋ ಕೆಮೆಸ್ಟ್ರಿ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿರುವ ಪ್ರಜ್ಞಾ ವಿಪುಲ್ ರವರು ಮಂಡಿಸಿದ “Correlation of Bone, Pancreas and Adipose Tissue Markers in Prediabetic and Diabetic Individuals” ಎಂಬ ವೈದ್ಯಕೀಯ ಸಂಶೋಧನಾ ವಿಷಯಕ್ಕೆ ಚೆನ್ನೈನ ಪ್ರತಿಷ್ಠಿತ ಸವಿತಾ ವಿಶ್ವವಿದ್ಯಾಲಯದಿಂದ
ಡಾಕ್ಟರೇಟ್ ಪದವಿ ಪಡೆದಿದ್ದಾರೆ.
ಮಂಡೆಕೋಲು ಗ್ರಾಮದ ಪೇರಾಲು ನೀರ್ಪಾಡಿ ಮನೆಯ ದಿ. ವಿಶ್ವನಾಥ ನೀರ್ಪಾಡಿ ಮತ್ತು ಶ್ರೀಮತಿ ಪುಷ್ಪಾ ವಿಶ್ವನಾಥ ಅವರ ಸೊಸೆ. ಹಾಗೂ ಬಿಳಿನೆಲೆ ಗ್ರಾಮದ ಹೊಸೋಕ್ಲು ಮನೆಯ ನಿವೃತ್ತ ಮುಖ್ಯ ಶಿಕ್ಷಕ ದಂಪತಿಗಳಾದ ರೇಗಪ್ಪ ಗೌಡ ಮತ್ತು ಶ್ರೀಮತಿ ಜಯಂತಿರವರ ಪುತ್ರಿಯಾಗಿರುವ ಇವರು ತನ್ನ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಸುಬ್ರಹ್ಮಣ್ಯ
ಕುಮಾರಸ್ವಾಮಿ ವಿದ್ಯಾಸಂಸ್ಥೆಯಲ್ಲಿ, ಪದವಿ ಪೂರ್ವ ಮತ್ತು ಪದವಿ ಶಿಕ್ಷಣವನ್ನು ಪುತ್ತೂರಿನ ವಿವೇಕಾನಂದ ಕಾಲೇಜಿನಲ್ಲಿ,
ಮೈಸೂರಿನ ಜೆಎಸ್ಎಸ್ ಮೆಡಿಕಲ್ ಕಾಲೇಜಿನಲ್ಲಿ ಮೆಡಿಕಲ್ ಬಯೋ ಕೆಮಿಸ್ಟ್ರಿ ವಿಭಾಗದಲ್ಲಿ ಎಂಎಸ್ಸಿ ಸ್ನಾತಕೋತ್ತರ ಪದವಿ ಪೂರೈಸಿದ್ದರು.
ಇವರ ಪತಿ ವಿಪುಲ್ ನೀರ್ಪಾಡಿ ಅವರು ಸುಳ್ಯದಲ್ಲಿ ವಕೀಲರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪುತ್ರ ವಿಯಾನ್.







