ಇಂದು ದಾಸನಕಜೆ ಬ್ರಹ್ಮಶ್ರೀ ಕ್ರೀಡಾ ಸಂಘದ ವತಿಯಿಂದ ಸಾರ್ಲಪಟ್ಟದ ಸತ್ಯ ಯಕ್ಷಗಾನ ಬಯಲಾಟ

0

ಬ್ರಹ್ಮಶ್ರೀ ಕ್ರೀಡಾ ಸಂಘ ದಾಸನಕಜೆ ನೆಲ್ಲೂರು ಕೆಮ್ರಾಜೆ ಇದರ ವತಿಯಿಂದ ಭಕ್ತರ ಇಷ್ಟಾರ್ಥ ಈಡೇರಿಸಿಕೊಟ್ಟ ಅಜ್ಜ ಕೊರಗತನಿಯ ದೈವದ ಪುಣ್ಯ ಚರಿತೆಯನ್ನು ಸಾರುವ ಪ್ರಾರ್ಥನಾ ಆಧಾರಿತ ಕಥೆ ಯಕ್ಷಗಾನ ರೂಪದಲ್ಲಿ ಸಂತೋಷ್ ಶೆಟ್ಟಿ ಕಡ್ತಲ ವಿರಚಿತ ‘ಸಾರ್ಲ ಪಟ್ಟದ ಸತ್ಯ’ ಎಂಬ ಪುಣ್ಯ ಕಥಾ ಭಾಗವು ಇಂದು ಶ್ರೀ ಬ್ರಹ್ಮಮೊಗೇರ್ಕಳ ದೈವಸ್ಥಾನ ದಾಸನಕಜೆ ಇದರ ವಠಾರದಲ್ಲಿ ನಡೆಯಲಿದೆ.
ಭಾಗವತರಾಗಿ ನಾಗರಾಜ ಉಪಾಧ್ಯಾಯ, ಶಶಾಂಕ್ ಎಲಿಮಲೆ, ಚೆಂಡೆ ಮದ್ದಳೆಯಲ್ಲಿ ಲಕ್ಷ್ಮಣ ತಳಕಳ, ಮೋನಪ್ಪ ಗೌಡ, ಬಾಸು ಭಟ್, ಸ್ತ್ರೀ ವೇಶದಲ್ಲಿ ಪದ್ಮನಾಭ ಉಪಾಧ್ಯಾಯ, ಭುವನ್ ಶೆಟ್ಟಿ, ಸುಹಾಸ್, ಹಾಸ್ಯದಲ್ಲಿ ರವಿ ಭಂಡಾರಿ, ಸಚ್ಚಿದಾನಂದ ಪ್ರಭುಗಳು, ವಿಶೇಷ ಪಾತ್ರದಲ್ಲಿ ಅತಿಥಿ ಕಲಾವಿದರಾಗಿ ಸುಂದರ ರೈ ಮಂದಾರ, ಸುಂದರ ಇಂದ್ರಾಜೆ, ಕಲಾವಿದರಾಗಿ ಉದಯಕುಮಾರ್ ಅಡ್ಯನಡ್ಕ, ಪ್ರವೀಣ್ ರಾಜ್ ಆರ್ಲಪದವು, ಈಶ್ವರ್ ಪ್ರಸಾದ್ ತಿಂಗಳಾಡಿ, ಸುಹಾನ್, ನಿತೀಶ್, ಪ್ರದೀಪ್ ರೈ ಬೆಟ್ಟಂಪಾಡಿ, ಬಾಲಕೃಷ್ಣ ಮಂಗಲ್ಪಾಡಿ, ಜಯರಾಜ ಸುಬ್ರಹ್ಮಣ್ಯ, ಅಭಿ ವೇಣೂರು, ತಿಲಕ್ ಇದ್ದಾರೆ.

ಯಕ್ಷಗಾನ ಕಾರ್ಯಕ್ರಮ ಕ್ಕೆ ಯಕ್ಷಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಸಂಘಟನೆಯವರು ವಿನಂತಿಸಿದ್ದಾರೆ.