ಮೋದಿ ಯೋಜನೆ ಎಂದು ಹೆಸರು ಹೇಳಿ ಹಣದೋಚುವ ಹುನ್ನಾರ

0

ಬೆಳ್ಳಾರೆ ಪೇಟೆಯಲ್ಲಿ ಚಿನ್ನದ ಉಂಗುರ ಪಡೆದು ಅಪರಿಚಿತ ಪರಾರಿ

ಕೆಲವು ದಿನಗಳ ಹಿಂದೆ ಬೆಳ್ಳಾರೆಯಲ್ಲಿ
ಅಪರಿಚಿತ ಮಧ್ಯ ವಯಸ್ಕರೋರ್ವರು ಮೋದಿಯವರ ಹಣ ಅಕೌಂಟಿಗೆ ಬರುತ್ತದೆ ಆದುದರಿಂದ ಇವತ್ತು ಬ್ಯಾಂಕಿಗೆ ಕಟ್ಟಲು ಸ್ವಲ್ಪ ಹಣ ಬೇಕು ಎಂದು ಹೇಳಿ ಇಬ್ಬರಿಂದ ತಲಾ ಎರಡು ಸಾವಿರ ರೂ ಹಣ ಪಡೆದುಕೊಂಡು ಪರಾರಿಯಾಗಿದ್ದ.
ಇದೇ ರೀತಿಯ ಘಟನೆಯೊಂದು ಪುನ: ಬೆಳ್ಳಾರೆ ಪೇಟೆಯಲ್ಲಿ ಮರುಕಳಿಸಿದೆ.
ಮೇ. 20 ರಂದು ಬೆಳ್ಳಾರೆ ಪೇಟೆಯಲ್ಲಿ ಕೊಡಿಯಾಲದ ರಾಧಾಕೃಷ್ಣ ಪೊಟ್ರೆ ಎಂಬವರಲ್ಲಿ ಅಪರಿಚಿತರೋರ್ವರು ಮೋದಿಯ ಹೆಸರು ಹೇಳಿ ನನ್ನ ಅಕೌಂಟಿಗೆ ಹಣ ಬಂದಿದೆ. ಅದನ್ನು ತೆಗೆಯಲು ಮೆನೇಜರ್ ರಿಗೆ ಕೊಡಲು ನನಗೆ ಈಗ 7,000 ಹಣ ಬೇಕು ಎಂದು ಕೇಳಿದರೆನ್ನಲಾಗಿದೆ. ಪರಿಚಯ ಇದ್ದವರಂತೆ ಆ ವ್ಯಕ್ತಿ ಮಾತನಾಡಿದರೆನ್ನಲಾಗಿದೆ.
ಅವರು ಹಣ ಇಲ್ಲ ವೆಂದರೆನ್ನಲಾಗಿದೆ.ಆದರೆ ಸ್ವಲ್ಪವಾದರೂ ಹಣ ಕೊಡಿ ಎಂದು ಆ ವ್ಯಕ್ತಿ ಪಟ್ಟುಹಿಡಿದರೆನ್ನಲಾಗಿದೆ.
ಆಗ ರಾಧಾಕೃಷ್ಣರವರು ನನ್ನಲ್ಲಿ 2000 ಹಣ ಇದೆ ಎಂದು ಹೇಳಿದರು ಆಗ ಇದು ಸಾಕಾಗುವುದಿಲ್ಲ ಎಂದು ಅಪರಿಚಿತ ಹೇಳಿದ್ದು,
ಕೆಲ ಹೊತ್ತು ಮಾತನಾಡಿದ ಬಳಿಕ ನಿಮ್ಮ ಕೈಯಲ್ಲಿದ್ದ ಉಂಗುರ ತೆಗೆದು ಕೊಡಿ ಎಂದು ಅಪರಿಚಿತ ಹೇಳಿದರೆನ್ನಲಾಗಿದೆ.
ಆಗ ರಾಧಾಕೃಷ್ಣರವರು ತನ್ನ ಕೈಯಲ್ಲಿದ್ದ ಉಂಗುರವನ್ನು ತೆಗೆದುಕೊಟ್ಟರು.
ಉಂಗುರ ತೆಗೆದುಕೊಟ್ಟ ಕೂಡಲೇ ಆ ವ್ಯಕ್ತಿ ನೀವು 50 ರೂಪಾಯಿಯ ಠಸೆ ಪೇಪರು ತನ್ನಿ ನಾವು ಮತ್ತೆ ಒಟ್ಟಿಗೆ ಬ್ಯಾಂಕಿಗೆ ಹೋಗುವ ಈಗ ನಾನು ಇಲ್ಲೆ ಇರುತ್ತೇನೆ ಎಂದು ಹೇಳಿದರೆನ್ನಲಾಗಿದೆ.
ರಾಧಾಕೃಷ್ಣರವರು ಠಸೆ ಪೇಪರು ತರಲು ಸ್ವಲ್ಪ ದೂರ ನಡೆದು ಹೋಗುವಾಗ ಇವರಿಗೆ ಸಂಶಯ ಬಂದು ವಾಪಾಸು ತಿರುಗಿ ಬರುವಾಗ ಅಪರಿಚಿತ ಪರಾರಿಯಾಗಿರುವುದಾಗಿ ತಿಳಿದುಬಂದಿದೆ.
ಈ ಬಗ್ಗೆ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿರುವುದಾಗಿ ತಿಳಿದು ಬಂದಿದೆ.
ಈ ಬಗ್ಗೆ ಬೆಳ್ಳಾರೆ ಠಾಣೆಯಲ್ಲಿ ದೂರು ನೀಡಲಾಗಿದೆ ಎಂದು ತಿಳಿದು ಬಂದಿದೆ.