ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕಿ ಭಾಗೀರಥಿ ಮುರುಳ್ಯರವರು ಜಯನಗರ ಪರಿಸರಕ್ಕೆ ಮೇ 28 ರಂದು ಭೇಟಿ ನೀಡಿ ಸಾರ್ವಜನಿಕ ಸಭೆ ನಡೆಸಿದರು.
ಶಾಸಕಿ ಭೇಟಿ ನೀಡಿದ ಸಂದರ್ಭ ಸ್ಥಳೀಯ ಬಿಜೆಪಿ ಪಕ್ಷದ ಕಾರ್ಯಕರ್ತರು ವಿಜಯೋತ್ಸವ ಮಾಡಿ ಸಂಭ್ರಮಿಸಿದರು.
ಈ ಸಂದರ್ಭದಲ್ಲಿ ಹಳೆಗೇಟಿನ ಶ್ರೀ ಮುತ್ತು ಮಾರಿಯಮ್ಮ ದೇವಸ್ಥಾನ, ಕೊರಂಬಡ್ಕ ಆದಿ ಮೊಗೇರ್ಕಳ ದೈವಸ್ಥಾನ ಗಳಿಗೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.ಜಯನಗರದ ಕಾಮತ್ ಅಂಗಡಿಯ ಬಳಿ ಸಭೆ ನಡೆಸಿ ಬಿಜೆಪಿ ಪಕ್ಷದ ಗೆಲುವಿಗಾಗಿ ಶ್ರಮಿಸಿದ ಎಲ್ಲಾ ಕಾರ್ಯಕರ್ತರುಗಳಿಗೆ ಕೃತಜ್ಞತೆಯನ್ನು ನುಡಿದರು.
ವೇದಿಕೆಯಲ್ಲಿ, ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ಹರೀಶ್ ಕಂಜಿಪಿಲ್ಲಿ,ಬಿಜೆಪಿ ಪಕ್ಷದ ಮುಖಂಡರುಗಳು ನಗರ ಪಂಚಾಯತ್ ಮಾಜಿ ಅಧ್ಯಕ್ಷರು ಗಳಾದ ಪ್ರಕಾಶ್ ಹೆಗ್ಡೆ, ವಿನಯ್ ಕುಮಾರ್ ಕಂದಡ್ಕ, ನಗರ ಪಂಚಾಯತ್ ಸದಸ್ಯೆ ಶಿಲ್ಪಾ ಸುದೇವ್, ಮುಖಂಡರುಗಳಾದ ಜಿನ್ನಪ್ಪ, ರೋಹಿತ್ ಕೊಯಿಂಗೋಡಿ, ಹಿರಿಯರಾದ ರಾಧಾಕೃಷ್ಣ ನಾಯಕ್, ಶಿವನಾಥ್ ರಾವ್ ಹಳೆಗೇಟು, ಸುರೇಂದ್ರ ಕಾಮತ್, ಮೊದಲಾದವರು ಉಪಸ್ಥಿತರಿದ್ದರು. ಜಯನಗರ ಪರಿಸರದ ಹಿರಿಯರಾದ ಚಂದ್ರಣ್ಣ ಟೈಲರ್ ಶಾಸಕಿಯವರಿಗೆ ಹೂಗುಚ್ಚವನ್ನು ನೀಡಿ ಜನತೆಯ ಪರವಾಗಿ ಸ್ವಾಗತಿಸಿದರು.
ಈ ಸಂದರ್ಭದಲ್ಲಿ ಜಯನಗರ ಪರಿಸರದ ಬಿಜೆಪಿ ಪಕ್ಷದ ಕಾರ್ಯಕರ್ತರು ಪಟಾಕಿ ಸಿಡಿಸಿ ವಿಜಯೋತ್ಸವ ಮಾಡಿದರು. ನೂರಕ್ಕೂ ಹೆಚ್ಚು ಪಕ್ಷದ ಕಾರ್ಯಕರ್ತರು ಹಿರಿಯರು ಭಾಗವಹಿಸಿದ್ದರು.