ವಿದ್ಯಾರ್ಥಿಗಳು ಉತ್ತಮ ವ್ಯಕ್ತಿತ್ವವನ್ನು ಬೆಳೆಸಿಕೊಂಡು ಸಾಧನೆಗೈಯಲು ಉತ್ತಮ ಸಾಮರ್ಥ್ಯವನ್ನು ಮೊದಲು ಗಳಿಸಬೇಕು.ಆ ಮೂಲಕ ನಿರಂತರ ಸಾಧನೆಯೊಂದಿಗೆ ಯಶಸ್ಸು ಗಳಿಸಬಹುದು ಎಂದು ಸುಳ್ಯ ನೆಹರು ಮೆಮೋರಿಯಲ್ ಕಾಲೇಜಿನ ಶೈಕ್ಷಣಿಕ ಸಲಹೆಗಾರರಾದ ಪ್ರೊ ಎಂ ಬಾಲಚಂದ್ರ ಗೌಡ ಅವರು ಹೇಳಿದರು.ಡಾ.ಕುರುಂಜಿ ವೆಂಕಟ್ರಮಣ ಗೌಡರ ದೂರದೃಷ್ಟಿಯ ಫಲವಾಗಿ ಸಮಾಜದ ಏಳಿಗೆಯಾಗಿದೆ,ಸುಳ್ಯದಲ್ಲಿ ಶಿಕ್ಷಣದ ಕ್ರಾಂತಿಯಾಗಿದೆ ಎoದು ಅವರು ತಿಳಿಸಿದರು.
ಸುಳ್ಯದ ನೆಹರು ಮೆಮೋರಿಯಲ್ ಪ.ಪೂ ಕಾಲೇಜಿನಲ್ಲಿ ಜೂನ್ 1ರಂದು ಪ್ರ. ಪಿಯುಸಿ ವಿದ್ಯಾರ್ಥಿಗಳಿಗೆ ನಡೆದ ಸ್ವಾಗತ ಮತ್ತು ಶೈಕ್ಷಣಿಕ ಮಾಹಿತಿ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಸ್ಥೆಯ ಪ್ರಾoಶುಪಾಲರಾದ ಹರಿಣಿ ಪುತ್ತೂರಾಯ ಅವರು ವಿದ್ಯಾರ್ಥಿಗಳು ಜವಾಬ್ದಾರಿಯುತ ಗುಣ ಬೆಳೆಸಿಕೊಂಡು ತಮ್ಮ ಕನಸುಗಳಿಗೆ ಪೂರಕವಾಗಿ ಪಠ್ಯ ಮತ್ತು ಪಠ್ಯ ಪೂರಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಾಗ ಪೂರ್ಣ ವ್ಯಕ್ತಿತ್ವ ಅರಳಲು ಸಾಧ್ಯ .ಶಿಕ್ಷಕರ,ಪೋಷಕರು ಸಹಭಾಗಿತ್ವದಲ್ಲಿ ಮಕ್ಕಳ ಕಲಿಕಾ ಭವಿಷ್ಯ ಉಜ್ವಲವಾಗುವುದು.ಉತ್ತಮ ಮೌಲ್ಯ,ಆತ್ಮ ಗೌರವ ಹೊಂದಿ ನಮ್ರತೆಯಿಂದ ಬಾಳಿ ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ವೇದಿಕೆಯಲ್ಲಿ ಅತಿಥಿಗಳಾಗಿ ಉಪಸ್ಥಿತರಿದ್ದ ಪದವಿ ವಿಭಾಗದ ಪ್ರಾoಶುಪಾಲರಾದ ಪ್ರೊ ರುದ್ರ ಕುಮಾರ್ ಎಂ ಎಂ ಅವರು ಮಾತನಾಡಿ ಉತ್ತಮ ವಿದ್ಯಾರ್ಥಿಗಳಾಗಿ ಈ ಕಾಲೇಜಿಗೆ ಕೀರ್ತಿ ತನ್ನಿ ಎಂದು ಶುಭ ಹಾರೈಸಿದರು.ವೇದಿಕೆಯಲ್ಲಿ ವಿದ್ಯಾರ್ಥಿ ಕ್ಷೇಮಾಧಿಕಾರಿಗಳಾದ ರೇಷ್ಮಾ ಎಂ ಎಂ,ಹರೀಶ ಸಿ ಉಪಸ್ಥಿತರಿದ್ದರು.
ದ್ವಿತೀಯ ಪಿಯುಸಿ ವಿದ್ಯಾರ್ಥಿನಿಯರಾದ ಅಭಿಜ್ಞಾ ಮತ್ತು ಬಳಗದವರು ಪ್ರಾರ್ಥಿಸಿ,ವಿ ಕ್ಷೇಮಾಧಿಕಾರಿ ರೇಷ್ಮಾ ಸ್ವಾಗತಿಸಿದರು.ದ್ವಿ ಪಿಯುಸಿ ವಿದ್ಯಾರ್ಥಿನಿಯರಾದ ಅಂಬಿಕಾ ಮತ್ತು ಬಳಗದವರು ಆಶಯ ಗೀತೆ ಹಾಡಿದರು.ವಿ.ಕ್ಷೇಮಾಧಿಕಾರಿ ಹರೀಶ ಸಿ ವಂದಿಸಿದರು.ಉಪನ್ಯಾಸಕಿಯರಾದ ಕು ಬೇಬಿ ವಿದ್ಯಾ ಪಿ.ಬಿ.ಹಾಗೂ ಕು.ಉಮಾಶ್ರೀ ಪ್ರಭು ಕಾರ್ಯಕ್ರಮ ನಿರೂಪಿಸಿದರು.ಸಭಾ ಕಾರ್ಯಕ್ರಮದ ಬಳಿಕ ಪ್ರಾoಶುಪಾಲರಾದ ಹರಿಣಿ ಪುತ್ತೂರಾಯ ಅವರು ಶೈಕ್ಷಣಿಕ ಮಾಹಿತಿ ಕಾರ್ಯಕ್ರಮದಲ್ಲಿ ಕಾಲೇಜಿನ ನೀತಿ ನಿಯಮಗಳು, ಸಮಗ್ರ ಚಟುವಟಿಕೆಗಳ ಮಾಹಿತಿ ನೀಡಿದರು.