ಶ್ರೀ ಸರಸ್ವತಿ ಚಾರಿಟೇಬಲ್ ಟ್ರಸ್ಟ್ ಪುತ್ತೂರು,ಸುಳ್ಯ ಭಾಲಾವಲಿಕಾರ್ ರಾಜಾಪುರ ಸಾರಸ್ವತ ಸಮಾಜ, ಯುವ ಸಮಾಜ,
ದುರ್ಗಾಪರಮೇಶ್ವರಿ ಭಜನಾ ಮಂಡಳಿ,ಮಹಿಳಾ ಮಂಡಳಿ,
ದುರ್ಗಾಪರಮೇಶ್ವರಿ ಚಾರಿಟೇಬಲ್ ಟ್ರಸ್ಟ್ ಇದರ ಜಂಟಿ ಆಶ್ರಯದಲ್ಲಿ ಮಂಗಳೂರು ಅತ್ತಾವರ ಕೆ.ಎಂ.ಸಿ.ಆಸ್ಪತ್ರೆಯ ಸಹಯೋಗದಲ್ಲಿ ದಿ.ಉಮೇಶ್ ವಾಗ್ಲೆ ಸುಳ್ಯ ಮತ್ತು ದಿ.ವೈಕುಂಠ ಪ್ರಭು ಆಲೆಟ್ಟಿ ಯವರ ಸ್ಮರಣಾರ್ಥ
ಜೂ.3 ರಂದು ಬೃಹತ್ ಉಚಿತ ವೈದ್ಯಕೀಯ ಶಿಬಿರವು ಸುಳ್ಯದ ಕೇರ್ಪಳ ದುರ್ಗಾಪರಮೇಶ್ವರಿ ಕಲಾ ಮಂದಿರದಲ್ಲಿ ಉದ್ಘಾಟನೆ ಗೊಂಡಿತು.
ಸರಸ್ವತಿ ಚಾರಿಟೇಬಲ್ ಟ್ರಸ್ಟ್ ಪುತ್ತೂರು, ಸರಸ್ವತಿ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷರಾದ ಎಸ್.ಆರ್ ಸತೀಶ್ಚಂದ್ರ ರವರು ಅಧ್ಯಕ್ಷತೆ ವಹಿಸಿದ್ದರು.
ಶಿಬಿರದಉದ್ಘಾಟನೆಯನ್ನು ಸುಳ್ಯದ ಪ್ರಸೂತಿ ಮತ್ತು ಸ್ತ್ರೀ ರೋಗ ತಜ್ಞರಾದ ಡಾ.ಉಮಾಶಂಕರ ಬೋರ್ಕರ್ ವೈ ಯವರು ನೆರವೇರಿಸಿದರು. ಮಂಗಳೂರಿನ ಎ.ಜೆ.ಆಸ್ಪತ್ರೆಯ ವೈದ್ಯರಾದ ಡಾ.ರಾಘವೇಂದ್ರ ಪ್ರಸಾದ್ ಕೆ.ವಿ, ಸುಳ್ಯ ವಾಗ್ಲೆ ಸಂಕೀರ್ಣದ ನಿತ್ಯಾನಂದ ವಾಗ್ಲೆ, ಸುಳ್ಯ ಭಾಲಾವಲಿಕಾರ್ ರಾಜಾಪುರ ಸಾರಸ್ವತ ಸಮಾಜ, ದುರ್ಗಾಪರಮೇಶ್ವರಿ ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷ ಹೇಮಂತ್ ಕುಮಾರ್ ಕಂದಡ್ಕ , ಭಾಲಾವಲಿಕಾರ್ ರಾಜಾಪುರ ಸಾರಸ್ವತ ಯುವ ಸಮಾಜದ ಉಪಾಧ್ಯಕ್ಷ ಧನಂಜಯ ಕುಮಾರ್ ಕೆ, ಕೆ.ಎಂ.ಸಿ.ಆಸ್ಪತ್ರೆಯ ಸಂಯೋಜಕ ಹರ್ಬರ್ಟ್ ಮಂಗಳೂರು,
ದುರ್ಗಾಪರಮೇಶ್ವರಿ ಮಹಿಳಾ ಭಜನಾ ಮಂಡಳಿ ಅದ್ಯಕ್ಷೆ ಶ್ರೀಮತಿ ಅನಿತ ಕೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ನಿವೃತ್ತ ಶಿಕ್ಷಕ ಗಾಯಕ ಕೆ.ಆರ್.ಗೋಪಾಲಕೃಷ್ಣ ರವರು ವೈಯುಕ್ತಿಕ ಗೀತೆ ಹಾಡಿದರು. ಕು.ಗಾನಶ್ರೀ
ಪ್ರಾರ್ಥಿಸಿದರು.ಸಹಕಾರಿ ಸಂಘದ ಪುತ್ತೂರು ಶಾಖೆಯ ವ್ಯವಸ್ಥಾಪಕ ದೇವಿಪ್ರಸಾದ್ ಎ
ಸ್ವಾಗತಿಸಿದರು.
ಸುಳ್ಯ ಶಾಖೆಯ ವ್ಯವಸ್ಥಾಪಕ ರಾಜೇಶ್ ಬಿ.ಎಸ್ ವಂದಿಸಿದರು.ಸುಳ್ಯ ಶಾಖೆಯ ಸಿಬ್ಬಂದಿ ವೆಂಕಟೇಶ್ ಕೆ ಕಾರ್ಯಕ್ರಮ ನಿರೂಪಿಸಿದರು.
ಶಿಬಿರದಲ್ಲಿ ತಜ್ಞ ವೈದ್ಯರಿಂದ ಕಣ್ಣು, ಕಿವಿ,ಮೂಗು,ಗಂಟಲು,
ಎಲುಬು,ಕೀಲು ಮುಂತಾದ ಆರೋಗ್ಯ ಸಮಸ್ಯೆ ಇರುವ ರೋಗಿಗಳನ್ನು ಪರೀಕ್ಷಿಸಲಾಯಿತು. ಉಚಿತ ಔಷಧಿ ವಿತರಣೆ, ಕನ್ನಡಕ ವಿತರಿಸಲಾಯಿತು.
ಸಾಮಾನ್ಯ ಆರೋಗ್ಯ ತಪಾಸಣೆ, ಮಧುಮೇಹ ತಪಾಸಣೆಯನ್ನು ಅಗತ್ಯ ವಿರುವ ರೋಗಿಗಳಿಗೆ ತಜ್ಞ ವೈದ್ಯರು ನಡೆಸಿಕೊಟ್ಟರು. ಬೆಳಗ್ಗೆ ನೂರಾರು ಮಂದಿ ಆರೋಗ್ಯ ತಪಾಸಣೆಗಾಗಿ ಸರತಿ ಸಾಲಿನಲ್ಲಿ ನಿಂತಿದ್ದರು.