ಕೊರತ್ತೋಡಿ -ಬೊಳ್ಳಾಜೆ ರಸ್ತೆ ಕಳೆಪೆಯಾಗಿಲ್ಲ : ಇಂಜಿನಿಯರ್ ಸ್ಪಷ್ಟನೆ

0


ನೆಲ್ಲೂರು ಕೆಮ್ರಾಜೆ ಗ್ರಾಮದ ಕೊರತ್ತೋಡಿ ಬೊಳ್ಳಾಜೆ ರಸ್ತೆಗೆ ಕಾಂಕ್ರೀಟ್ ಮಾಡಿರುವುದು ಕಳಪೆಯಾಗಿಲ್ಲ. ಅದು ಗಾಳಿಯ ಒತ್ತಡದಿಂದ ಬಿರಿಕು ಬಿಟ್ಟಿರಬಹುದೆಂದು ಇಂಜಿನಿಯರ್ ಹರೀಶ್ ಮೆದು ರವರು ಸ್ಪಷ್ಟನೆ ನೀಡಿದ್ದಾರೆ. ಕಾಂಕ್ರೀಟ್‌ನ ಕ್ಯೂರಿಂಗ್ ಅವಧಿ ಮುಗಿದ ತಕ್ಷಣ ಲೋಡ್ ವೆಹಿಕಲ್ ಹೋಗಿರುವ ಸಾಧ್ಯತೆ ಇದೆ. ಅಥವಾ ಗಾಳಿಯ ಒತ್ತಡದಿಂದಲೂ ಬಿರುಕು ಕಾಣಿಸುತ್ತದೆ. ಆದರೆ ಇದು ಕಳಪೆ ಅಲ್ಲ. ರಸ್ತೆ ಏನೂ ಆಗುವುದಿಲ್ಲ. ಬಿರುಕು ಬಿಟ್ಟಿರುವುದನ್ನು ಸರಿಪಡಿಸುತ್ತೇವೆ ಎಂದಿದ್ದಾರೆ. ಅಲ್ಲದೇ ನೆಲ್ಲೂರು ಕೆಮ್ರಾಜೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಶೀಲಾವತಿಯವರು ಪ್ರತಿಕ್ರಿಯಿಸಿ ಕಾಂಕ್ರಿಟ್ ಮಿಕ್ಸಿಂಗ್ ಸಂದರ್ಭದಲ್ಲಿ ನಾನು ಸ್ಥಳಕ್ಕೆ ಹೋಗಿzನೆ. ಕಾಂಕ್ರಿಟ್ ಕಳಪೆಯಾಗಿರಲು ಸಾಧ್ಯವಿಲ್ಲ. ಹಾಗಿದ್ದರೂ ಬಿರುಕು ಬಿಟ್ಟ ವಿಚಾರದ ಬಗ್ಗೆ ಇಂಜಿನಿಯರ್ ಜೊತೆ ಮಾತನಾಡಿzನೆ ಎಂದಿದ್ದಾರೆ.


ಕಾಂಕ್ರಿಟ್ ರಸ್ತೆ ಬಿರುಕು ಬಿಟ್ಟಿರುವ ಬಗ್ಗೆ ಸ್ಥಳೀಯರಾದ ರಾಜಾರಾಂ ಭಟ್ ಬೆಟ್ಟ, ಪ್ರಮೋದ್ ಬೊಳ್ಳಾಜೆಯವರು ಇದು ಕಳಪೆ ಕಾಮಗಾರಿಯಾಗಿದ್ದಲ್ಲಿ ಸಂಬಂಧಪಟ್ಟವರ ಮೇಲೆ ಸೂಕ್ತ ಕ್ರಮ ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.


ಈ ರಸ್ತೆಯು ಸಮಾಜ ಕಲ್ಯಾಣ ಇಲಾಖೆಯ ಅನುದಾನದಲ್ಲಿ ಮಾಡಲಾಗಿದ್ದು, ನಿರ್ಮಿತಿ ಕೇಂದ್ರದವರು ಈ ರಸ್ತೆಯನ್ನು ನಿರ್ಮಿಸಿದ್ದರು. ಇದು ಉದ್ಘಾಟನೆಗೆ ಮೊದಲೇ ಕಾಂಕ್ರೀಟ್ ನ ಕೆಲವು ಕಡೆ ಅಡ್ಡವಾಗಿ ಬಿರುಕು ಕಾಣಿಸಿಕೊಂಡಿತ್ತು.