ಸ್ನೇಹ ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆ

0

ಸುಳ್ಯದ ಸ್ನೇಹ ಶಿಕ್ಷಣ ಸಂಸ್ಥೆಯಲ್ಲಿ ವಿಶ್ವ ಪರಿಸರ ದಿನಾಚರಣೆಯನ್ನು ಜೂ.5 ರಂದು ಆಚರಿಸಲಾಯಿತು.

ಕಾರ್ಯಕ್ರಮದಲ್ಲಿ ಶಾಲಾ ಶಿಕ್ಷಕ ದೇವಿಪ್ರಸಾದ ಜಿ. ಸಿ ಕಾಯರ್ತೋಡಿ ಮಾತನಾಡಿ ” ಪರಿಸರ ದಿನಾಚರಣೆ ಕೇವಲ ಒಂದು ದಿನಕ್ಕೆ ಮಾತ್ರ ಸೀಮಿತವಾಗಿದೆ. ಪ್ರತಿದಿನ ಪರಿಸರ ದಿನ ಆಗಬೇಕು. ಗಿಡವನ್ನು ನೆಡುವುದು ಮಾತ್ರವಲ್ಲದೆ ಅದನ್ನು ಪೋಷಿಸುವ ಕರ್ತವ್ಯ ನಮಗಿದೆ. ನೀರನ್ನು ಇಂಗಿಸಿ ಅಂತರ್ಜಲ ಮಟ್ಟ ಹೆಚ್ಚಿಸಿ ಪರಿಸರವನ್ನು ಉಳಿಸುವತ್ತ ನಾವು ಕೊಡುಗೆ ನೀಡಬೇಕು. ಮಾಲಿನ್ಯ ಹೆಚ್ಚಾಗುತ್ತಿದ್ದು ಉಸಿರಾಡಲು ಶುದ್ದಗಾಳಿ ದೊರಕುತ್ತಿಲ್ಲ. ಸಸ್ಯ ಶ್ಯಾಮಲೆ ಎಂದೆನಿಸಿರುವ ಭಾರತ ಮಾತೆಯನ್ನು ಇನ್ನಷ್ಟು ಹಸಿರಾಗಿಸುವ ಕೆಲಸ ನಾವು ಮಾಡಬೇಕಾಗಿದೆ” ಎಂದು ಹೇಳಿದರು.

ಈ ಸಂದರ್ಭದಲ್ಲಿ ಶಾಲಾ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಶಾಲಾ ಶಿಕ್ಷಕಿ ಸವಿತಾ ಎಂ ಕಾರ್ಯಕ್ರಮ ನಿರ್ವಹಿಸಿದರು.