ಸುಳ್ಯ ಶ್ರೀ ಶಾರದಾ ಹೆಣ್ಣು ಮಕ್ಕಳ ಪ್ರೌಢ ಶಾಲೆಯಲ್ಲಿ ಜೂನ್ ೫ರಂದು ವಿಶ್ವ ಪರಿಸರ ದಿನಾಚರಣೆಯನ್ನು ಆಚರಿಸಲಾಯಿತು.
ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀಮತಿ ಬಾರತಿ ಪಿ. ಗಿಡ ನೆಟ್ಟು ವಿದ್ಯಾರ್ಥಿನಿಯರಿಗೆ ಪರಿಸರ ದಿನಾಚರಣೆಯ ಮಹತ್ವದ ಬಗ್ಗೆ ತಿಳಿಸಿದರು. ವಿಜ್ಙಾನ ಶಿಕ್ಷಕಿ ಮೈತ್ರಿ ಎಂ.ಬಿ. ಕಾರ್ಯಕ್ರಮ ನೇರವೇರಿಸಿದರು.
ಶಾಲಾ ಶಿಕ್ಷಕ ವೃಂದದವರು, ಸಿಬ್ಬಂದಿ ವರ್ಗದವರು, ವಿದ್ಯಾರ್ಥಿನಿಯರು ಪಾಲ್ಗೊಂಡಿದ್ದರು.