ಆಲೆಟ್ಟಿ ಪಂಚಾಯತ್ ಓರ್ವ ಸದಸ್ಯರ ಸದಸ್ಯತ್ವ ರದ್ದು – ಮರು ಚುನಾವಣೆಯ ಸಾಧ್ಯತೆ

0

ಆಲೆಟ್ಟಿ ಗ್ರಾಮ ಪಂಚಾಯತ್ ಆಡಳಿತ ಮಂಡಳಿಯ ಸದಸ್ಯರೊಬ್ಬರು ಸತತವಾಗಿ ನಾಲ್ಕು ಸಾಮಾನ್ಯ ಸಭೆಗೆ ಗೈರಾದ ಹಿನ್ನೆಲೆಯಲ್ಲಿ ಸದಸ್ಯತ್ವ ರದ್ದುಗೊಂಡಿರುವ ಬೆಳವಣಿಗೆ ನಡೆದಿರುವುದಾಗಿ ತಿಳಿದು ಬಂದಿದೆ.

ಆಲೆಟ್ಟಿ ಪಂಚಾಯತ್ ನಲ್ಲಿ ಒಟ್ಟು 21 ಮಂದಿ ಸದಸ್ಯರನ್ನು ಹೊಂದಿದ್ದು ಆಡಳಿತ ಪಕ್ಷ ಬಿಜೆಪಿ 13 ಸ್ಥಾನಗಳು ಮತ್ತು ಕಾಂಗ್ರೆಸ್ 8 ಸ್ಥಾನವನ್ನು ಗಳಿಸಿಕೊಂಡಿದ್ದು ವಿರೋಧ ಪಕ್ಷದ ಸ್ಥಾನದಲ್ಲಿದ್ದರು.

ಇದೀಗ ಬಡ್ಡಡ್ಕ ಪ್ರದೇಶದ 8 ನೇ ವಾರ್ಡಿನ‌ ಬಿಜೆಪಿ ಯ ಸದಸ್ಯ ಶಾಂತಪ್ಪ ರವರು ಸತತವಾಗಿ ಯಾವುದೇ ಕಾರಣ ನೀಡದೆ ಕಳೆದ 4 ಸಭೆಗೆ ಗೈರಾದ ಹಿನ್ನೆಲೆಯಲ್ಲಿ ಅವರ ಸದಸ್ಯತ್ವವನ್ನು ರದ್ದುಗೊಳಿಸುವಂತೆ ಪಂಚಾಯತ್ ಪಿ.ಡಿ.ಒ ಸಭೆಯ ನಿರ್ಣಯದಂತೆ ತಾಲೂಕು ಸಿ.ಇ.ಒ ರವರಿಗೆ ಪತ್ರ ಬರೆದಿರುವುದಾಗಿ ತಿಳಿದು ಬಂದಿದೆ.


ಆಡಳಿತ ಮಂಡಳಿ ಬಿಜೆಪಿ ಯ ಒಟ್ಟು ಸದಸ್ಯತ್ವದ ಬಲ 13 ಇದ್ದು ಇದೀಗ ಒಂದು ಸ್ಥಾನ ತೆರವಾಗಿದೆ. ಮುಂದೆ ಕಾನೂನಿನ ಪ್ರಕಾರ ತೆರವಾದ ಸ್ಥಾನಕ್ಕೆ ಚುನಾವಣೆ ನಡೆದು ಗೆಲುವು ಯಾರ ಪರ ಬರುವುದು ಕಾದು ನೋಡಬೇಕಾಗಿದೆ.