ಬೆಂಕಿ ತಗುಲಿ ಗಾಯಗೊಂಡ ಬಾಲೆಯನ್ನು ಭೇಟಿಯಾದ ಶಾಸಕಿ ಭಾಗೀರಥಿ ಮುರುಳ್ಯ

0

10 ಸಾವಿರ ಧನ ಸಹಾಯ

ಕೊಲ್ಲಮೊಗ್ರು ಗ್ರಾಮದ ಬೆಂಡೋಡಿಯ ಬಾಲಕಿಯೊಬ್ಬಳು ಓದುತಿದ್ದಾಗ ಬೆಂಕಿ ತಗುಲಿ ಸುಟ್ಟು ಹೋಗಿರುವ ಘಟನೆ ಎರಡು ತಿಂಗಳ ಹಿಂದೆ ನಡೆದಿದ್ದು ಅವರನ್ನು ಶಾಸಕಿ ಭಾಗೀರಥಿ ಮುರುಳ್ಯರವರು ಬಾಲಕಿಯನ್ನು ಭೇಟಿಯಾಗಿ 10 ಸಾವಿರ ನಗದು ಸಹಾಯ ನೀಡಿ ದೈರ್ಯ ತುಂಬಿ ಮಾನವೀಯತೆ ಮೆರೆದಿದ್ದಾರೆ.

ಕೊಲ್ಲಮೊಗ್ರು ಗ್ರಾಮದ ಲಿಂಗಪ್ಪ ಎಂಬವರ ಪುತ್ರಿ ಎಂಟನೇ ತರಗತಿಯ ಸಿಂಚನಾ ೨ ತಿಂಗಳ ಹಿಂದೆ ಮನೆಯ ಒಲೆಯ ಬಳಿ ಓದುತಿದ್ದರು. ಈ ಸಂದರ್ಭ ಬೆಂಕಿ ಬಾಲಕಿಯ ಬಟ್ಟೆಗೆ ಹತ್ತಿಕೊಂಡಿದೆ. ಪರಿಣಾಮ ಬಾಲಕಿಯ ಹೊಟ್ಟೆ, ಎದೆಯ ಭಾಗ, ದೇಹದ ಕೆಲ ಭಾಗಗಳಲ್ಲಿ ಬೆಂಕಿಗೆ ಸುಟ್ಟು ಗಂಭೀರ ಗಾಯಗಳಾಗಿತ್ತು.

ಬಾಲಕಿಗೆ ಸುಳ್ಯದ ಕೆ.ವಿ.ಜಿ ಆಸ್ಪತ್ರೆಯಲ್ಲಿ ಒಂದು ತಿಂಗಳ ಕಾಲ ಚಿಕಿತ್ಸೆ ಕೊಡಲಾಗಿದೆ. ಬಳಿಕ ಮನೆಗೆ ಕರೆದುಕೊಂಡು ಬರಲಾಗಿದ್ದು ಮನೆಯಲ್ಲಿ ಇದ್ದು ಚಿಕಿತ್ಸೆ ಮುಂದುವರೆಸಲಾಗಿದೆ. ಈ ಮಧ್ಯೆ ಮನೆಯವರು ಶಾಸಕಿ ಭಾಗೀರಥಿ ಅವರನ್ನು ಭೇಟಿಯಾಗಿ ಸಹಾಯ ಮಾಡುವಂತೆ ಕೋರಿದ್ದರು. ಜೂ. 9 ರಂದು ಭೇಟಿಯಾಗಿ ರೂ.೧೦ ಸಾವಿರ ನಗದು ಹಣ ನೀಡಿದ್ದಾರೆ. ಅಲ್ಲದೆ ಮುಂದಿನ ದಿನಗಳಲ್ಲಿ ಸಹಕಾರ ನೀಡುವ ಭರವಸೆ ನೀಡಿದ್ದಾರೆಂದು ತಿಳಿದು ಬಂದಿದೆ.


ಈ ಸಂದರ್ಭದಲ್ಲಿ ಮಂಡಲ ಅಧ್ಯಕ್ಷರಾದ ಹರೀಶ್ ಕಂಜಿಪಿಲಿ, ವಿನಯ್ ಕುಮಾರ್ ಮುಳುಗಾಡು, ಮಾಧವ ಚಂತಲಾ ಉಪಸ್ಥಿತರಿದ್ದರು.