ಸುಳ್ಯದಲ್ಲಿ ಸಂಚಾರಿ ಗುಳಿಗ ದೈವದ ಪ್ರತಿಷ್ಠಾ ಮಹೋತ್ಸವ

0

ಸಾರ್ವಜನಿಕ ಶ್ರೀ ಸಂಚಾರಿ ಗುಳಿಗ ಕ್ಷೇತ್ರ ಸೇವಾ ಟ್ರಸ್ಟ್ ಸುಳ್ಯ ಕಸಬಾಮೂಲೆ ಜೂನಿಯರ್ ಹತ್ತಿರ ಇದರ ವತಿಯಿಂದ ಸಂಚಾರಿ ಗುಳಿಗ ದೈವದ ಪ್ರತಿಷ್ಠಾ ಮಹೋತ್ಸವವು ಪೆರಾಜೆ ಬ್ರಹ್ಮ ಶ್ರೀ ವೇದವ್ಯಾಸ ತಂತ್ರಿಗಳ ನೇತೃತ್ವದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಜೂ.10 ರಿಂದ ಜೂ.12 ರವರೆಗೆ ವಿಜೃಂಭಣೆಯಿಂದ ನಡೆಯಿತು.
ಜೂ.10 ರಂದು ಸಂಜೆ ಸುದರ್ಶನ ಹೋಮ, ಪ್ರೇತಬಾಧೆ ಉಚ್ಛಾಟನೆ ನಡೆಯಿತು.


ಜೂ.11 ರಂದು ಸಂಜೆ ತಂತ್ರಿಗಳ ಆಗಮನವಾಯಿತು.
ಸಂಜೆ ಸಾಮೂಹಿಕ ಪ್ರಾರ್ಥನೆ,ಸ್ವಸ್ತಿ, ಪುಣ್ಯಾಹವಾಚನ,ಸ್ಥಳ ಶುದ್ಧಿ,ವಾಸ್ತುಹೋಮ, ವಾಸ್ತುಬಲಿ,ಪ್ರಾಕಾರಬಲಿಪೂಜೆ,ಅನ್ನಸಂತರ್ಪಣೆ ನಡೆಯಿತು.


ಜೂ.12 ರಂದು ಬೆಳಿಗ್ಗೆ ಗಣಹೋಮ,ಕಲಶಪೂಜೆ ನಡೆಯಿತು.
ನಂತರ ಶ್ರೀ ದೈವದ ಪ್ರತಿಷ್ಟೆ, ಕಲಶಾಭಿಷೇಕ, ತಂಬಿಲಸೇವೆ, ಮಹಾಪೂಜೆ,ನಿತ್ಯ ನೈಮಿತ್ಯಾದಿಗಳ ನಿರ್ಣಯ, ಪ್ರಸಾದ ವಿತರಣೆ ಬಳಿಕ ಭಕ್ತಾದಿಗಳಿಗೆ ಅನ್ನಸಂತರ್ಪಣೆ ನಡೆಯಿತು.


ಈ ಸಂದರ್ಭದಲ್ಲಿ ಸಂಚಾರಿ ಗುಳಿಗ ಸೇವಾ ಟ್ರಸ್ಟ್ ಆಡಳಿತ ಮಂಡಳಿ ಗೌರವಾಧ್ಯಕ್ಷ ಸಂಕಪ್ಪ ಗೌಡ ನೀರ್ಪಾಡಿ,ಅಧ್ಯಕ್ಷ ರಘುನಾಥ ಶೆಟ್ಟಿ, ಉಪಾಧ್ಯಕ್ಷ ನೋಣಪ್ಪ ಗೌಡ,ಕಾರ್ಯದರ್ಶಿ ಮುರಳಿ ಮಾವಂಜಿ, ಜತೆಕಾರ್ಯದರ್ಶಿ ಲವಕುಮಾರ್ ಕನ್ನಡ್ಕ, ಕೋಶಾಧಿಕಾರಿ ಮಹಾಲಿಂಗನ್ ಬಿ, ನಿರ್ದೇಶಕರಾದ ರಾಮಚಂದ್ರ ಭಟ್,ಶರತ್ ರಾಮಚಂದ್ರ,ದಿನೇಶ್ ಕುಮಾರ್ ಕೆ.ಸಿ, ಗೌರವ ಸಲಹೆಗಾರರಾದ ಕೃಷ್ಣಪ್ಪ ಗೌಡ ಪಾರೆಪ್ಪಾಡಿ, ವಾಸುದೇವ ಬಳ್ಳಡ್ಕ , ಕವನ್ ಮಯ್ಯ, ಚಂದ್ರಶೇಖರ ನಾಯಕ್,ದಯಾನಂದ ಹೊದ್ದೆಟ್ಟಿ,ತಾರಾಪ್ರಸಾದ್ ಜಾಕೆ,ದುರ್ಗಾಪ್ರಸಾದ್ ಕದಿಕಡ್ಕ,ಕೃಷ್ಣಪ್ಪ ಗೌಡ ಕಲ್ಮಲೆ,ರಾಮಕೃಷ್ಣ ರಾವ್,ಐ.ರಾಜೀವ ಸುವರ್ಣ,ಚೇತನ್ ಕುಡೆಕಲ್ಲು,ಎಂ.ಡಿ.ನಿರಂಜನ,ವಿಜಯ ಕುಮಾರ್ ಪೀರನಮನೆ ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದರು.