ಎಪ್ಪತ್ತರ ಸಂಭ್ರಮದ ಪ್ರಯುಕ್ತ‌ ಡಾ. ಶಿಶಿಲರಿಂದ ಎಪ್ಪತ್ತು ಸಾವಿರದ ಪುಸ್ತಕ ಕೊಡುಗೆ

0

ಹಿರಿಯ ಸಾಹಿತಿ ಡಾ. ಪ್ರಭಾಕರ ಶಿಶಿಲರು ತಾನು ಎಪ್ಪತ್ತರ ಹರೆಯವನ್ನು ಪ್ರವೇಶಿಸಿದ ಸಲುವಾಗಿ ವಿದ್ಯಾ ಸಂಸ್ಥೆಗಳಿಗೆ ಎಪ್ಪತ್ತು ಸಾವಿರ ರೂ. ಮೌಲ್ಯದ ಪುಸ್ತಕ ದಾನ ಮಾಡಿದ್ದಾರೆ.

ತಾನು ೩೬ ವರ್ಷ ವೃತ್ತಿ ಜೀವನ ನಡೆಸಿದ ನೆಹರೂ ಮೆಮೋರಿಯಲ್ ಕಾಲೇಜಿಗೆ ರೂ. 25000/- ತಾನು ಓದಿದ ಕಾಲೇಜು ಎಸ್.ಡಿ.ಎಂ. ಉಜಿರೆಗೆ ರೂ. 15000/- ಸುಳ್ಯದ ಸರಕಾರಿ ಪ್ರಥಮ ದರ್ಜೆ ಕಾಲೇಜಿಗೆ ರೂ. 10000/-, ತನ್ನ ಮೊದಲ ಶಿಕ್ಷಣ ಸಂಸ್ಥೆ ಶಿಶಿಲ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ರೂ. 5000/- ಪಂಜ ಮೊರಾರ್ಜಿ ದೇಸಾಯಿ ಶಾಲೆಗೆ ರೂ. 3000/- ಮತ್ತು ಮಂಗಳೂರು ವಿಶ್ವವಿದ್ಯಾಲಯ ಕಾಲೇಜಿಗೆ ರೂ. 2000/- ಮೌಲ್ಯದ ಪುಸ್ತಕಗಳನ್ನು ಉಚಿತವಾಗಿ ಹಂಚಿದ್ದಾರೆ. ಹೀಗೆ ಎಪ್ಪತ್ತು ವರ್ಷ ತುಂಬುತ್ತಿರುವ ಹಂತದಲ್ಲಿ ಎಪ್ಪತ್ತು ಸಾವಿರ ಮೌಲ್ಯದ ಸ್ವರಚಿತ ಪುಸ್ತಕಗಳನ್ನು ಕೊಡುಗೆಯಾಗಿ ನೀಡಿ ಹೊಸ ಮೌಲ್ಯ ಸೃಷ್ಠಿಸಿದ್ದಾರೆ.


2023ರ ಡಿಸೆಂಬರ 21ರಂದು 70 ತುಂಬುವಾಗ ತನ್ನ 70 ಕತೆಗಳ ಸಂಕಲನ ಕಥಾ ಸಪ್ತತಿ ಹೊರತರಲು ಶಿಶಿಲರು ಯೋಜನೆ ರೂಪಿಸಿದ್ದಾರೆ. ಈ ಕೃತಿಯೊಡನೆ ನಾನೇಕೆ ಕತೆ ಬರೆದೆ ಎಂಬ ಕೃತಿಯನ್ನು ಉಚಿತವಾಗಿ ನೀಡಲಾಗುತ್ತದೆ ಎಂದು ಶಿಶಿಲರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.