ಕಳೆದ ಒಂದು ವರ್ಷದಿಂದ ಸುಳ್ಯ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ರವಿ ಜಯನಗರ ಚಿಕಿತ್ಸೆ ಫಲಕಾರಿಯಾಗದೆ ಇಂದು ನಿಧನರಾಗಿದ್ದಾರೆ. ಅವರಿಗೆ 48 ವರ್ಷ ವಯಸ್ಸಾಗಿತ್ತು.
ಇವರು ವರ್ಷದ ಹಿಂದೆ ಮನೆಯೊಂದರ ಗೋಡೆಗೆ ಕಲ್ಲು ಕಟ್ಟುತ್ತಿದ್ದಾಗ ಮೇಲಿನಿಂದ ಕೆಳಕ್ಕೆ ಬಿದ್ದು ಸೊಂಟದ ಮೂಳೆ ಮುರಿದು ಮಲಗಿದ್ದಲ್ಲೆ ಇರುವಂತಾಗಿತ್ತು. ಆಸ್ಪತ್ರೆಯಲ್ಲಿದ್ದ. ಅವರ ಚಿಕಿತ್ಸೆಗೆ ಹಾಗೂ ಜೀವನ ನಿರ್ವಹಣೆಗೆ ಹಲವು ಮಂದಿ ಸಹಕಾರ ನೀಡಿದ್ದರು. ಇದೀಗ ಅವರು ಕೊನೆಯುಸಿರೆಳೆದಿದ್ದಾರೆ.
ಪತ್ನಿ ಮತ್ತು ಇಬ್ಬರು ಮಕ್ಕಳನ್ನು ಅವರು ಅಗಲಿದ್ದಾರೆ.