ಲಾಸ್ಯ ಕಿಶನ್ ದೇರಪ್ಪಜ್ಜನ ಮನೆ ಯವರಿಗೆ ರಾಷ್ಟ್ರಮಟ್ಟದ ಈಜು ಸ್ಪರ್ಧೆಯಲ್ಲಿ ಬಹುಮಾನ

0

ಬೆಂಗಳೂರಿನ ವಿಲ್ಸನ್ ಗಾರ್ಡನ್ ನಲ್ಲಿರುವ ರೇ ಸೆಂಟರ್ ಈಜುಕೊಳದಲ್ಲಿ ಭಾರತದಲ್ಲಿ ಪ್ರಥಮ ಬಾರಿಗೆ ರೆಸ್ಕ್ಯೂ ಇಂಡಿಯಾ 2023, ಹೆಸರಿನಲ್ಲಿ ನಡೆದ 18ನೇ ರಾಷ್ಟ್ರೀಯ ಜೀವರಕ್ಷಕ ಈಜು ಸಂದ್ಯಾಟದಲ್ಲಿ ಲಾಸ್ಯ ಕಿಶನ್ ದೇರಪ್ಪಜ್ಜನ ಮನೆ ಎರಡು ಚಿನ್ನ, 2 ಬೆಳ್ಳಿ, 1 ಕಂಚಿನ ಪದಕ ಪಡೆದಿರುತ್ತಾರೆ.

ಪುತ್ತೂರಿನ ವಿವೇಕಾನಂದ (ಸಿ.ಬಿ.ಎಸ್.ಇ) ಶಾಲೆಯಲ್ಲಿ 7ನೇ ತರಗತಿಯ ವಿದ್ಯಾರ್ಥಿನಿ. ಪರ್ಲಡ್ಕ ಡಾl ಶಿವರಾಮ ಕಾರಂತ ಬಾಲವನದ ಈಜುಕೊಳದ ಈಜು ತರಬೇತುದಾರರಾದ ಪಾರ್ಥ ವಾರಣಾಸಿ, ರೋಹಿತ್, ದೀಕ್ಷಿತ್ ಅವರುಗಳಿಂದ ತರಬೇತಿ ಪಡೆಯುತ್ತಿದ್ದಾರೆ. ಇವರು ಗುತ್ತಿಗಾರು ಗ್ರಾಮದ ಕಿಶನ್ ದೇರಪಜ್ಜನ ಮನೆ ಮತ್ತು ದೀನಾ ದಂಪತಿಗಳ ಪುತ್ರಿ.