ಭಾರತ್ ಸ್ಕೌಟ್ಸ್ ಗೈಡ್ಸ್ ಸುಳ್ಯ ಸ್ಥಳೀಯ ಸಂಸ್ಥೆಯ ವತಿಯಿಂದ ವಿಶ್ವ ಯೋಗ ದಿನಾಚರಣೆ ಮತ್ತು ದ್ವೀತೀಯ ಸೋಪಾನ ಸುಳ್ಯದ ಅಮೃತ ಭವನ ಸಭಾಂಗಣದಲ್ಲಿ ಜೂ.21 ರಂದು ನಡೆಯಿತು.
ಶಿಕ್ಷಣ ಸಂಯೋಜಕಿ ಶ್ರೀಮತಿ ಸಂದ್ಯಾ ಕುಮಾರಿ ದೀಪ ಬೆಳಗಿಸಿ ಉದ್ಘಾಟಿಸಿದರು.
ಕ್ಷೇತ್ರ ಸಂಪನ್ಮೂಲ ಸಮನ್ವಯಾಧಿಕಾರಿ ಶ್ರೀಮತಿ ಶೀತಲ್ ಶುಭ ಹಾರೈಸಿದರು. ಸ್ಥಳೀಯ ಸಂಸ್ಥೆಯ ಗೌರವಾಧ್ಯಕ್ಷ ರೋ. ಬಾಪು ಸಾಹೇಬ್ ಸಭಾಧ್ಯಕ್ಷತೆ ವಹಿಸಿದ್ದರು.
ಉಪಾಧ್ಯಕ್ಷ ಮಾಧವ ಮಡಪ್ಪಾಡಿ, ಶ್ರೀಹರಿ ಪೈಂದೋಡಿ, ಕಾರ್ಯದರ್ಶಿ ಎ. ಎಲ್. ಟಿ .ಗೈಡ್. ಶ್ರೀಮತಿ ಪ್ರೇಮಲತಾ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸ್ಕೌಟ್ಸ್ ಮಾಸ್ಟರ್ ಶ್ರೀಮತಿ ಸುನಂದ ಯೋಗ ತರಬೇತಿ ನೀಡಿದರು.
ನಂತರ ದ್ವಿತೀಯ ಸೋಪಾನ ಪರೀಕ್ಷೆ ನಡೆಯಿತು. ಸುಮಾರು 162 ಸ್ಕೌಟ್ಸ್ ಗೈಡ್ಸ್ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ
ಕಾರ್ಯದರ್ಶಿ ಶ್ರೀಮತಿ ಪ್ರೇಮಲತ ಸ್ವಾಗತಿಸಿದರು. ಗೈಡ್ ಕ್ಯಾಪ್ಟನ್ ಶ್ರೀಮತಿ ನಳಿನಾಕ್ಷಿ ಕಲ್ಮಡ್ಕ ಕಾರ್ಯಕ್ರಮ ನಿರೂಪಿಸಿದರು.
ಸ್ಕೌಟ್ಸ್ ಮಾಸ್ಟರ್ ಭಾನುಪ್ರಕಾಶ್ ವಂದಿಸಿದರು.