ಕದಿಕಡ್ಕ ಶಾಲಾ ಎಸ್‌ಡಿಎಂಸಿ ಅಧ್ಯಕ್ಷರಾಗಿ ಸುಜಾತ ಬೇರ್ಪಡ್ಕ

0

ಜಾಲ್ಸೂರು ಗ್ರಾಮದ ಕದಿಕಡ್ಕ ಸ.ಹಿ.ಪ್ರಾ ಶಾಲೆ ಇಲ್ಲಿನ ಎಸ್‌ಡಿಎಂಸಿ ಸಮಿತಿಯಲ್ಲಿ ಅಧ್ಯಕ್ಷರು ಮತ್ತು ೩ ಸದಸ್ಯ ಸ್ಥಾನಗಳು ತೆರವಾಗಿದ್ದು ಜೂ.೧೭ರಂದು ನಡೆದ ಪೋಷಕರ ಸಭೆಯಲ್ಲಿ ತೆರವಾದ ಸ್ಥಾನಗಳಿಗೆ ನೂತನ ಸದಸ್ಯರುಗಳನ್ನು ಆಯ್ಕೆ ಮಾಡಿ ಶ್ರೀಮತಿ ಸುಜಾತ ಬೇರ್ಪಡ್ಕ ಇವರನ್ನು ಎಸ್‌ಡಿಎಂಸಿ ಯ ನೂತನ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು. ಇದೇ ಸಂದರ್ಭ ಸಮಿತಿಯವರು ಮತ್ತು ಪೋಷಕರಿಂದ ಶಾಲಾ ವಠಾರದ ನೀರಿನ ಟ್ಯಾಂಕ್‌ನ ಸ್ವಚ್ಛತಾ ಕಾರ್ಯಕ್ರಮವನ್ನು ನಡೆಸಲಾಯಿತು.