ಸಂಪಾಜೆ : ಮಳೆಗೆ ಕಾಂಪೌಂಡ್ ಕುಸಿತ, ಕೊಟ್ಟಿಗೆಗೆ ಹಾನಿ

0

ಮಳೆಯಿಂದಾಗಿ ಕಾಂಪೌಂಡ್ ಕುಸಿತಗೊಂಡು ಕೊಟ್ಟಿಗೆಗೆ ಹಾನಿ ಸಂಭವಿಸಿದ ಘಟನೆ ಸಂಪಾಜೆಯಿಂದ ವರದಿಯಾಗಿದೆ.

ಸಂಪಾಜೆ ಗ್ರಾಮದ ಅಶ್ರಫ್ ಟರ್ಲಿಯವರ ಕಾಂಪೌಂಡ್ ಇಂದು ಸುರಿದ ಮಳೆಗೆ ಕುಸಿತಗೊಂಡಿದೆ. 2 ವರ್ಷದ ಹಿಂದೆ ಭೂ ಕುಸಿತವಾಗಿದ್ದ ಸಂದರ್ಭದಲ್ಲಿ ಈ ಕಾಂಪೌಂಡ್ ಕೂಡ ಜರಿದು ಬಿದ್ದಿದ್ದು ಇದಕ್ಕೆ ಸರಕಾರದಿಂದ 4000 ರೂ ಪರಿಹಾರವೂ ದೊರಕಿತ್ತು. ಇದನ್ನು ಕೆಲ ತಿಂಗಳ ಹಿಂದೆ 3 ಲಕ್ಷ ಖರ್ಚು ಮಾಡಿ ಪುನಃ ಕಾಂಪೌಂಡ್ ನಿರ್ಮಾಣ ಮಾಡಲಾಗಿತ್ತು. ಆದರೆ ಇಂದು ಸುರಿದ ಮಳೆಗೆ ಕಾಂಪೌಂಡ್ ವಾಪಾಸ್ ಸಂಪೂರ್ಣ ಕುಸಿದು ಬಿದ್ದಿದೆ.

ಪರಿಣಾಮವಾಗಿ ಪಕ್ಕದ ಮನೆ ಹಾಗೂ ಕೊಟ್ಟಿಗೆ ಜಖಂಗೊಂಡಿದ್ದು, ಅಪಾರ ನಷ್ಟ ಸಂಭವಿಸಿದೆ.