ಸುಳ್ಯದ ತರಣ್ಸ್ ಡ್ಯಾನ್ಸಿಂಗ್ ಯೂನಿಟ್ ನಲ್ಲಿ ನೃತ್ಯ ತರಬೇತಿ

0

ಸುಳ್ಯದ ಜ್ಯೂನಿಯರ್ ಕಾಲೇಜು ರಸ್ತೆಯ ಮಹಿಳಾ ಮಂಡಲಗಳ ಒಕ್ಕೂಟದ ಸಭಾಭವನದಲ್ಲಿ ಕಾರ್ಯಾಚರಿಸುತ್ತಿರುವ ತರುಣ್ಸ್ ಡ್ಯಾನ್ಸಿಂಗ್ ಯೂನಿಟ್ ನಲ್ಲಿ ನೃತ್ಯ ತರಬೇತಿಯು ಪ್ರತೀ ಶನಿವಾರ ಹಾಗೂ ಆದಿತ್ಯವಾರ ಬೆಳಿಗ್ಗೆ 10ರಿಂದ ರಾತ್ರಿ 8ರವರೆಗೆ ಜರುಗುತ್ತಿದೆ.

ಸಂಸ್ಥೆಯಲ್ಲಿ ನೃತ್ಯದ ವಿವಿಧ ಪ್ರಕಾರಗಳಾದ ಶಾಲಾ – ಕಾಲೇಜು ನೃತ್ಯ ಸಂಯೋಜನೆ, ಹುಟ್ಟುಹಬ್ಬ ಸಂಯೋಜನೆ, ಮದುವೆ ಕಾರ್ಯಕ್ರಮ ಸಂಯೋಜನೆ, ಸಂಗೀತ, ರಿಯಾಲಿಟಿ ಶೋ ಸಂಯೋಜನೆ, ಸ್ಟೇಜ್ ಶೋ, ಪ್ರೊಡಕ್ಟ್ ಲಾಂಚ್ ಶೋ, ಬಾಲಿವುಡ್ , ಹಿಪ್ ಹಾಪ್, ಸೆಮಿ ಕ್ಲಾಸಿಕಲ್, ವೆಸ್ಟರ್ನ್, ಜಾನಪದ, ಆಕ್ರೋಬ್ಯಾಟಿಕ್ಸ್, ಟೈಗರ್ ಡ್ಯಾನ್ಸ್ ಸೇರಿದಂತೆ ಇನ್ನಿತರ ನೃತ್ಯ ತರಬೇತಿ ನೀಡಲಾಗುವುದು ಎಂದು ಸಂಸ್ಥೆಯ ಮಾಲಕರು ತಿಳಿಸಿದ್ದಾರೆ.