ಜಬಳೆ: ಚಳ್ಳದಲ್ಲಿ ರಸ್ತೆ ಮೇಲೆ ಹರಿದ ನೆರೆ ನೀರು: ಸಂಚಾರಕ್ಕೆ ಅಡ್ಡಿ

0

ಭಾರೀ ಮಳೆಗೆ ಜಬಳೆ – ಪೈಲಾರು ರಸ್ತೆಯ ಚಳ್ಳ ಎಂಬಲ್ಲಿ ತೋಡಿನ ನೀರು ತುಂಬಿ ಹರಿದು ಸೇತುವೆಯವ ಮೇಲೂ ಹರಿದಿದ್ದು ಸ್ವಲ್ಪ ಕಾಲ ಸಂಚಾರಕ್ಕೆ ಅಡ್ಡಿಯಾಗಿದೆ. ಸಮೀಪದ ತೋಟಗಳಿಗೂ ನೆರೆ ನೀರು ನುಗ್ಗಿದೆ.

ಹೊಸದಾಗಿ ನಿರ್ಮಾಣಗೊಂಡಿರುವ ರಸ್ತೆ ಮೊದಲ ಮಳೆಗೇ ಅಲ್ಲಲ್ಲಿ ಹೊಂಡ , ಗುಂಡಿ ಬಿದ್ದಿದ್ದು ಭಾರೀ ಮಳೆಗೆ ಮೋರಿಗಳಿಗೂ ಅಪಾಯವಾಗುವ ಸ್ಥಿತಿ ಬಂದಿದೆ.