ಕನಕಮಜಲು: ಕೋಡಿಯಲ್ಲಿ ಮನೆಯ ಬಳಿ ಬರೆ ಕುಸಿತ

0

ಇನ್ನಷ್ಟು ಬರೆ ಕುಸಿಯುವ ಭೀತಿ ಹಿನ್ನೆಲೆ – ಸ್ಥಳಾಂತರವಾಗುವಂತೆ ಗ್ರಾ.ಪಂ. ಸೂಚನೆ

ಕನಕಮಜಲು ಗ್ರಾಮದ ಕೋಡಿ ಎಂಬಲ್ಲಿ ಭಾರೀ ಮಳೆಯಿಂದಾಗಿ ಮನೆಯ ಬಳಿ ಬರೆಕುಸಿತವಾಗಿದ್ದು, ಗ್ರಾಮ ಪಂಚಾಯತಿ ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ, ಇನ್ನಷ್ಟು ಬರೆ ಕುಸಿತಗೊಳ್ಳವ ಭೀತಿಯಿದ್ದು, ಮನೆಯವರನ್ನು ಸಂಬಂಧಿಕರ ಮನೆಗೆ ಸ್ಥಳಾಂತರವಾಗುವಂತೆ ಸೂಚಿಸಿದ ಘಟನೆ ಜು.6ರಂದು ಸಂಭವಿಸಿದೆ.

ಕನಕಮಜಲು ಗ್ರಾಮ ಪಂಚಾಯಿತ್ ವ್ಯಾಪ್ತಿಯ ಕೋಡಿ ನಿವೇಶನ ಪ್ರದೇಶದಲ್ಲಿ ವಾಸವಾಗಿರುವ ಶ್ರೀಮತಿ ಮಹೇಶ್ವರಿ ಎಂಬವರ ಮನೆ ಸಮೀಪ ಬರೆ ಕುಸಿದು ಮನೆಯ ಸಮೀಪ ಬಿದ್ದಿದ್ದು, ಸ್ಥಳಕ್ಕೆ ಗ್ರಾ ಪಂ ವತಿಯಿಂದ ಭೇಟಿ ನೀಡಿ ಇನ್ನಷ್ಟು ಕುಸಿಯುವ ಭೀತಿ ಇರುವ ಕಾರಣದಿಂದಾಗಿ ಸ್ಥಳಾಂತರವಾಗುವಂತೆ ಸೂಚಿಸಿದರು.
ಈ ಸಂದರ್ಭದಲ್ಲಿ ಗ್ರಾ.ಪಂ. ಅಧ್ಯಕ್ಷ ಶ್ರೀಧರ ಕುತ್ಯಾಳ, ಅಭಿವೃದ್ಧಿ ಅಧಿಕಾರಿ ಶ್ರೀಮತಿ ಸರೋಜಿನಿ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.