ಅಲ್ ಅಮೀನ್ ವೆಲ್ಫೇರ್ ಅಸೋಸಿಯೇಷನ್ (ರಿ) ಗೂನಡ್ಕ ಇದರ 12 ನೇ ವಾರ್ಷಿಕ ಮಹಾಸಭೆ ಜು 7 ರಂದು ಅಸೋಸಿಯೇಷನ್ ಅಧ್ಯಕ್ಷರಾದ ಜಾಫರ್ ಸಾಧಿಕ್ ಕುಂಭಕ್ಕೋಡ್ ಇವರ ಅಧ್ಯಕ್ಷತೆಯಲ್ಲಿ ಗೂನಡ್ಕ ಹಯಾತುಲ್ ಇಸ್ಲಾಂ ಮದ್ರಸದಲ್ಲಿ ಜರುಗಿತು.ಗೂನಡ್ಕ ಬದ್ರಿಯಾ ಜುಮಾ ಮಸೀದಿಯ ಖತೀಬರಾದ ಬಹು. ಮಹಮ್ಮದ್ ಅಲಿ ಸಖಾಫಿಯವರು ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಈ ಹಿಂದೆ ಸಮಿತಿಯಲ್ಲಿ ಸೇವೆ ಸಲ್ಲಿಸಿ ಮರಣ ಹೊಂದಿದ ಅಸೋಸಿಯೇಷನಿನ ಪೋಷಕ ಮತ್ತು ಪ್ರಾಥಮಿಕ ಸದಸ್ಯರುಗಳಿಗೆ ತಹ್ಲೀಲ್ ಸಮರ್ಪಿಸಿ ವಿಶೇಷ ಪ್ರಾರ್ಥನೆ ನಡೆಸಿದರು.
ಗೌರವಾಧ್ಯಕ್ಷರಾದ ಮಹಮ್ಮದ್ ಕುಂಞ ಗೂನಡ್ಕರವರು ಪ್ರಾಸ್ತಾವಿಕವಾಗಿ ಮಾತನಾಡಿ ಸಂಘಟನೆಯು ಬೆಳೆದು ಬಂದ ಹಾದಿಯ ಕುರಿತು ಮಾಹಿತಿಯನ್ನು ನೀಡಿದರು.ಸಂಘಟನಾ ಕಾರ್ಯದರ್ಶಿ T B ಅಬ್ದುಲ್ ಅಝೀಝ್ 2022-23 ನೇ ಸಾಲಿನ ವಾರ್ಷಿಕ ವರದಿ ಹಾಗೂ ಲೆಕ್ಕ ಪತ್ರಗಳನ್ನು ಮಂಡಿಸಿದರು.
ವರದಿಯಲ್ಲಿ ಸಂಘಟನೆಯ ವತಿಯಿಂದ ಗತ ವರ್ಷದಲ್ಲಿ ಬಡ ಹೆಣ್ಣುಮಕ್ಕಳ ವಿವಾಹಕ್ಕೆ 4 ಲಕ್ಷ ರೂ ಹಾಗೂ ಗೌರವ ಶಿಕ್ಷಕರ ವೇತನಕ್ಕೆ ಶ್ರೀ ಶಾರದಾ ಅನುದಾನಿತ ಶಾಲೆಗೆ 25,000 ರೂ ನೀಡಿದ್ದನ್ನು ಮಹಾಸಭೆಗೆ ವರದಿಯಲ್ಲಿ ವಿವರಿಸಲಾಯಿತು ವೇದಿಕೆಯಲ್ಲಿ ಸ್ಥಳೀಯ ಜಮಾಅತ್ ಅಧ್ಯಕ್ಷರಾದ D R ಅಬ್ದುಲ್ ಖಾದರ್,ಪ್ರಧಾನ ಕಾರ್ಯದರ್ಶಿ P A ಉಮ್ಮರ್ ದರ್ಕಾಸ್ತು ,ಮಾಜಿ ಅಧ್ಯಕ್ಷರುಗಳಾದ ಹಾಜಿ P A ಉಮ್ಮರ್ ಗೂನಡ್ಕ,ಹಾಜಿ P A ಅಬ್ದುಲ್ಲಾ ಕೊಪ್ಪದಕಜೆ,ಹಯಾತುಲ್ ಇಸ್ಲಾಂ ಮದ್ರಸ ಗೂನಡ್ಕಇದರ ಸದರ್ ಮುಅಲ್ಲಿಮರಾದ ಹಬೀಬ್ ಹಿಮಮಿ, ಅಸೋಸಿಯೇಷನಿನ ಪದಾಧಿಕಾರಿಗಳಾದ ಮಹಮ್ಮದ್ ಪೆಲ್ತಡ್ಕ ,A T ಹಸನ್,D M ಅಬ್ದುಲ್ಲಾ ಹಾಗೂ ನಿರ್ದೇಶಕರಾದ ಮಹಮ್ಮದ್ ಮಿರ್ಷಾದ್ ಉಪಸ್ಥಿತರಿದ್ದರು.
ಅಧ್ಯಕ್ಷರಾದ ಜಾಫರ್ ಸಾಧಿಕ್ ಕುಂಭಕ್ಕೋಡ್ ಸ್ವಾಗತಿಸಿದರು. ಅಂತಿಮವಾಗಿ ಮೂರು ಸ್ವಲಾತಿನೊಂದಿಗೆ ಮಹಾಸಭೆಯನ್ನು ಮುಕ್ತಾಯಗೊಳಿಸಲಾಯಿತು.