ಜಾಲ್ಸೂರು: ಪಯಸ್ವಿನಿ ಪ್ರೌಢಶಾಲೆ ನೂತನ ಎಸ್.ಡಿ.ಎಂ.ಸಿ. ರಚನೆ

0

ಅಧ್ಯಕ್ಷರಾಗಿ ಸಿ.ಹೆಚ್. ಅಬ್ದುಲ್ ಖಾದರ್ ಆಯ್ಕೆ

ಜಾಲ್ಸೂರಿನ ಪಯಸ್ವಿನಿ ಪ್ರೌಢಶಾಲೆಯ 2023-24ನೇ ಸಾಲಿನ ನೂತನ ಎಸ್.ಡಿ.ಎಂ.ಸಿ.ಯನ್ನು ಜು.10ರಂದು ನಡೆದ ಪೋಷಕರ ಸಭೆಯಲ್ಲಿ ರಚಿಸಲಾಯಿತು.


ಅಧ್ಯಕ್ಷರಾಗಿ ಸಿ.ಹೆಚ್. ಅಬ್ದುಲ್ ಖಾದರ್ ಕದಿಕಡ್ಕ, ಉಪಾಧ್ಯಕ್ಷರಾಗಿ ಲಕ್ಷ್ಮೀ, ಪೋಷಕ ಸದಸ್ಯರಾಗಿ ಮಮ್ತಾಜ್, ಮಹಮ್ಮದ್ ಪಿ., ಪುರುಷೋತ್ತಮ, ಮಾದವ, ಜಯರಾಮ, ಚಂದನಿ ಹಾಗೂ ಚಂದ್ರಶೇಖರ ಅವರನ್ನು ನೇಮಕ ಮಾಡಲಾಯಿತು.

ಪದನಿಮಿತ್ತ ಸದಸ್ಯರುಗಳಾಗಿ ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಕುಸುಮಾವತಿ, ಅಂಗನವಾಡಿ ಕಾರ್ಯಕರ್ತೆ ಶ್ರೀಮತಿ ಗಿರಿಜ, ಆರೋಗ್ಯ ಕಾರ್ಯಕರ್ತೆ ಶ್ರೀಮತಿ ಜಲಜಾಕ್ಷಿ ಆಯ್ಕೆಯಾದರು.


ನಾಮ ನಿರ್ದೇಶಿತ ಸದಸ್ಯರುಗಳಾಗಿ ಗ್ರಾ.ಪಂ. ಸದಸ್ಯ ಎನ್.ಎಂ. ಸತೀಶ್ ಕೆಮನಬಳ್ಳಿ, ಸಹಶಿಕ್ಷಕ ಶಿವಪ್ರಕಾಶ್ ಕೆ., ಶಾಲಾ ಮುಖ್ಯಮಂತ್ರಿ ರೋಶನ್ ಕೆ.ಬಿ. ಆಯ್ಕೆಯಾದರು.