ಕೋಲ್ಚಾರು ರಸ್ತೆ ಮೇಲೆ ಬೀಳುವ ಹಂತದಲ್ಲಿದೆ ಅಪಾಯಕಾರಿ ಮರಗಳು

0

ಬರೆ ಕುಸಿದು ಸಂಪರ್ಕ ಕಡಿತಗೊಳ್ಳುವ ಭೀತಿಯಲ್ಲಿ ನಾಗರಿಕರು

ಆಲೆಟ್ಟಿ ಗ್ರಾಮದ ಕೋಲ್ಚಾರು ಬಂದಡ್ಕ ಅಂತರ್ ರಾಜ್ಯ ಸಂಪರ್ಕದ ರಸ್ತೆಯಲ್ಲಿ ಆನೆಕಲ್ಲು ಎಂಬಲ್ಲಿ ಬರೆ ಕುಸಿತ ಆರಂಭಗೊಂಡಿದೆ. ಧಾರಕಾರ ಮಳೆಯಿಂದಾಗಿ ಮಣ್ಣು ಕುಸಿತಗೊಂಡು ರಸ್ತೆಯ ಮೇಲೆ ಬಿದ್ದಿದೆ. ಅಲ್ಲದೆ ಭಾರಿ ಗಾತ್ರದ ಮರಗಳು ರಸ್ತೆಯ ಮೇಲೆ ಬಾಗಿಕೊಂಡಿದ್ದು ಬೀಳುವ ಹಂತದಲ್ಲಿದೆ. ಬರೆ ಕುಸಿತ ಹೀಗೆ ಮುಂದುವರಿದರೆ ಸಂಪರ್ಕ ಕಡಿತಗೊಂಡು ಸಂಚಾರಕ್ಕೆ ಅಡಚಣೆ ಯಾಗುವ ಸಾಧ್ಯತೆ ಇದೆ. ಈ ರಸ್ತೆಯ ಮೂಲಕ ದಿನ ನಿತ್ಯ ಶಾಲಾ ಕಾಲೇಜುಗಳಿಗೆ ಸುಮಾರು 300 ಕ್ಕೂ ಮಿಕ್ಕಿ ವಿದ್ಯಾರ್ಥಿಗಳು ಸಂಚರಿಸುತ್ತಿದ್ದಾರೆ.

ಖಾಸಗಿ ಹಾಗೂ ಕೆ.ಎಸ್.ಆರ್.ಟಿ.ಸಿ ಬಸ್ ಸಂಚಾರವು ಇದೆ. ಅಂತರ್ ರಾಜ್ಯ ಸಂಪರ್ಕದ ರಸ್ತೆ ಯಾಗಿರುವುದರಿಂದ ನೂರಾರು ವಾಹನಗಳು ಸಂಚರಿಸುತ್ತಿರುತ್ತದೆ. ಸಂಬಂಧ ಪಟ್ಟ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಅಪಾಯಕಾರಿ ಮರಗಳನ್ನು ತೆರವು ಗೊಳಿಸಿ ರಸ್ತೆ ಸಂಪರ್ಕ ಕಡಿತಗೊಳ್ಳದಂತೆ ಮುನ್ನೆಚ್ಚರಿಕೆ ವಹಿಸುವಂತೆ ಸ್ಥಳೀಯ ನಾಗರಿಕರು ಆಗ್ರಹಿಸಿದ್ದಾರೆ.