ಸಹಕರಿಸಿದ 9 ಮಂದಿ ಸದಸ್ಯರಿಗೆ ಗೌರವ ಸನ್ಮಾನ
ಲಂಚ ಭ್ರಷ್ಟಾಚಾರ ನಿರ್ಮೂಲನೆಯ ಪ್ರತಿಜ್ಞಾವಿಧಿ ಸ್ವೀಕರಿಸಿ ಬೆಂಬಲ ವ್ಯಕ್ತಪಡಿಸಿದ ಸದಸ್ಯರು
ಸುಳ್ಯ ಸಂಧ್ಯಾರಶ್ಮಿ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ನಿ. ಇದರ ನಾಲ್ಕನೇ ವಾರ್ಷಿಕ ಮಹಾಸಭೆ ಜು.25 ರಂದು ಸಂಧ್ಯಾರಶ್ಮಿ ಸಭಾಂಗಣದಲ್ಲಿ ನಡೆಯಿತು.
ಸೊಸೈಟಿಯ ಅಧ್ಯಕ್ಷ ಡಾ. ಎಸ್ ರಂಗಯ್ಯ ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದರು. ಸಭಾ ಕಾರ್ಯಕ್ರಮದ ಆರಂಭದಲ್ಲಿ ಸಮಿತಿಯ ಉಪಾಧ್ಯಕ್ಷ ವಿಶ್ವನಾಥ್ ನಾಯರ್ ಪ್ರಾರ್ಥನೆ ಗೀತೆಯನ್ನು ಹಾಡಿ ಸಭಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಸಮಿತಿಯ ನಿರ್ದೇಶಕ ನಾಗಪ್ಪ ಗೌಡ ಬೊಮ್ಮಟ್ಟಿ ಗತ ವರ್ಷದಲ್ಲಿ ಅಗಲಿದ ಸದಸ್ಯರಿಗೆ ಶ್ರದ್ಧಾಂಜಲಿ ನಮನ ಸಲ್ಲಿಸಿ ಸಭೆಯಲ್ಲಿ ಒಂದು ನಿಮಿಷದ ಮೌನಚರಣೆ ನಡೆಯಿತು. ನಿರ್ದೇಶಕರುಗಳಾದ ಸುಧಾಮ ಎ ಕಳೆದ ಸಾಲಿನ ಮಹಾಸಭೆಯ ನೋಟಿಸ್ ಅನ್ನು ಓದಿ ಸಭೆಯಲ್ಲಿ ಮಂಡಿಸಿದರು.
ಹಿಂದಿನ ಮಹಾಸಭೆಯ ನಡವಳಿಕೆಗಳನ್ನು ಸೊಸೈಟಿಯ ಸಿಇಒ ಜಯಂತಿ ಎಂ ಆರ್ ಓದಿ ಸಭೆಯಲ್ಲಿ ಮಂಡಿಸಿದರು. ಬಳಿಕ ಅಧ್ಯಕ್ಷರು 2022.23ನೇ ಸಾಲಿನ ವಾರ್ಷಿಕ ವರದಿ ಮಂಡನೆ ಮತ್ತು ಅಂಗೀಕಾರದ ಬಗ್ಗೆ ಸಭೆಯಲ್ಲಿ ಓದಿ ತಿಳಿಸಿದರು. ಉಪಾಧ್ಯಕ್ಷ ವಿಶ್ವನಾಥ ನಾಯರ್ ಎಂ 22-23 ನೇ ಸಾಲಿನ ಜಮಾ ಖರ್ಚು, ಲಾಭ ನಷ್ಟ, ಮತ್ತು ಆಸ್ತಿ ಜವಾಬ್ದಾರಿ ತಖ್ತೆಗಳನ್ನು ಸಭೆಗೆ ವಿವರಿಸಿದರು.
ನಿರ್ದೇಶಕ ವಾಸುದೇವ ಎನ್ ಕಳೆದ ಸಾಲಿನ ಬಜೆಟಿಗಿಂತ ಮೀರಿ ಖರ್ಚಾದ ಮೊಬಲುಗಳ ಮಂಜೂರಾತಿ ಬಗ್ಗೆ ಓದಿ ವಿವರಿಸಿ 23-24 ನೇ ಸಾಲಿನ ಅಂದಾಜು ಬಜೆಟ್ ಮಂಡಿಸಿ ಅಂಗೀಕಾರವನ್ನು ಸಭೆಯಿಂದ ಪಡೆದರು.
ನಿರ್ದೇಶಕ ಕಮಲಾಕ್ಷ ಪಿಜೆ ಲೆಕ್ಕ ಪರಿಶೋಧನಾ ವರದಿಯಲ್ಲಿ ಕಾಣಿಸಿದ ನ್ಯೂನ್ಯತೆಗಳನ್ನು ಸರಿಪಡಿಸಿದ ಸಮಜಾಯಿಷಿಕೆ ವರದಿಯ ಮಂಡನೆ ಮತ್ತು ಅಂಗೀಕಾರದ ಬಗ್ಗೆ ಓದಿ ತಿಳಿಸಿದರು.
ಈ ಸಂದರ್ಭದಲ್ಲಿ ಅಧ್ಯಕ್ಷರು ಸಭೆಯ ಅನುಮತಿ ಪಡೆದು ಉಪವಿಧಿಗಳ ತಿದ್ದುಪಡಿಗಳ ಅನುಮೋದನೆ ಪಡೆದುಕೊಂಡು
22,23ನೇ ಸಾಲಿನ ನಿವ್ವಳ ಲಾಭಾಂಶ ಹಂಚಿಕೆ 2,87585 ರೂಪಾಯಿಗಳ ಹಂಚಿಕೆಯ ಬಗ್ಗೆ ಸಭೆಯಲ್ಲಿ ಮಂಡಿಸಿದರು.
ಸಭೆಯಲ್ಲಿ ಸೊಸೈಟಿಯ ನಿರ್ದೇಶಕರಾಗಿ ಸೇವೆ ಸಲ್ಲಿಸಿ ಗುರುತಿಸಿಕೊಂಡಿರುವ 9 ಮಂದಿ ಸದಸ್ಯರಿಗೆ ಈ ಸಂದರ್ಭದಲ್ಲಿ ಸನ್ಮಾನ ಕಾರ್ಯಕ್ರಮ ನಡೆಯಿತು.
ಸುದ್ದಿ ಜನಾಂದೋಲನ ವೇದಿಕೆಯ ಲಂಚ ಭ್ರಷ್ಟಾಚಾರದ ವಿರುದ್ಧದ ಪ್ರತಿಜ್ಞಾವಿಧಿ ಸ್ವೀಕಾರ
ಸಭೆಯಲ್ಲಿ ಸುದ್ದಿ ಸಮೂಹ ಸಂಸ್ಥೆ ಹಮ್ಮಿಕೊಂಡಿರುವ ಲಂಚ ಭ್ರಷ್ಟಾಚಾರ ನಿರ್ಮೂಲನೆಯ ಜನಜಾಗ್ರತಿ ಮತ್ತು ಆಂದೋಲನದ ಪ್ರತಿಜ್ಞಾ ಬೋಧನೆ ಕಾರ್ಯಕ್ರಮ ನಡೆಯಿತು.
ಸುದ್ದಿ ಪತ್ರಿಕೆಯ ವರದಿಗಾರ ಹಸೈನಾರ್ ಜಯನಗರ ಭ್ರಷ್ಟಾಚಾರ ನಿರ್ಮೂಲನೆಯ ಆಂದೋಲನದ ಬಗ್ಗೆ ಮಾಹಿತಿ ನೀಡಿ ಸಭೆಯಲ್ಲಿ ಫಲಕವನ್ನು ಪ್ರದರ್ಶಿಸಿ ಪ್ರತಿಜ್ಞಾವಿಧಿ ಬೋಧಿಸಿದರು. ಈ ಸಂದರ್ಭದಲ್ಲಿ ಸೊಸೈಟಿ ಸಂಘದ ಅಧ್ಯಕ್ಷರು, ಉಪಾಧ್ಯಕ್ಷರು,ಹಾಗೂ ನಿರ್ದೇಶಕರು,ಸಂಘದ 50ಕ್ಕೂ ಹೆಚ್ಚು ಸದಸ್ಯರು ಪ್ರತಿಜ್ಞೆಯನ್ನು ಮಾಡುವ ಮೂಲಕ ಸುದ್ದಿಯ ಆಂದೋಲನಕ್ಕೆ ಬೆಂಬಲ ವ್ಯಕ್ತಪಡಿಸಿದರು.
ಡಾ ಎಸ್ ರಂಗಯ್ಯ ರವರು ಕಳೆದ ನಾಲ್ಕು ವರ್ಷಗಳಿಂದ ಸೊಸೈಟಿಯ ಅಭಿವೃದ್ಧಿ ಕಾರ್ಯಕ್ಕೆ ಶ್ರಮಿಸಿದ ಸರ್ವರಿಗೂ ಕೃತಜ್ಞತೆಯನ್ನು ಸಲ್ಲಿಸಿ ಕಾರ್ಯಕ್ರಮಗಳ ಬಗ್ಗೆ ವಿವರಿಸಿ ಸಹಕಾರವನ್ನು ಕೋರಿದರು.
ನಿರ್ದೇಶಕರುಗಳಾದ ಬಾಬುಗೌಡ ಎ ಸ್ವಾಗತಿಸಿ ಸುಬ್ರಹ್ಮಣ್ಯ ಹೊಳ್ಳ ವಂದಿಸಿದರು. ನಿರ್ದೇಶಕ ಅಬ್ದುಲ್ಲ ಕಾರ್ಯಕ್ರಮ ನಿರೂಪಿಸಿದರು