ಜು.31ರಂದು ಶಾಲೆಯಲ್ಲಿ ಪಯಸ್ವಿನಿ ಎಜ್ಯುಕೇಶನ್ ಸೊಸೈಟಿ ವತಿಯಿಂದ ಬೀಳ್ಕೊಡುಗೆ ಸಮಾರಂಭ
ಜಾಲ್ಸೂರಿನ ಪಯಸ್ವಿನಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಕುಸುಮಾವತಿ ಯು.ಪಿ. ಅವರು ತಮ್ಮ 32 ವರ್ಷಗಳ ಶಿಕ್ಷಕ ವೃತ್ತಿಯಿಂದ ಜು.31ರಂದು ನಿವೃತ್ತಿಯಾಗಲಿದ್ದು, ಜು.31 ಪಯಸ್ವಿನಿ ಎಜ್ಯುಕೇಶನ್ ಸೊಸೈಟಿ ವತಿಯಿಂದ ಶಾಲೆಯಲ್ಲಿ ಬೀಳ್ಕೊಡುಗೆ ಸಮಾರಂಭ ನಡೆಯಲಿದೆ.
ಜಾಲ್ಸೂರಿನ ಪಯಸ್ವಿನಿ ಎಜ್ಯುಕೇಶನ್ ಸೊಸೈಟಿ ವತಿಯಿಂದ ಪ್ರಾರಂಭಗೊಂಡ ಪಯಸ್ವಿನಿ ಪ್ರೌಢಶಾಲೆಯಲ್ಲಿ 1991ರಲ್ಲಿ ಸಹಶಿಕ್ಷಕಿಯಾಗಿ ಸೇರ್ಪಡೆಗೊಂಡ ಶ್ರೀಮತಿ ಯು.ಪಿ. ಕುಸುಮಾವತಿ ಅವರು ಸುದೀರ್ಘ ವರ್ಷಗಳ ಅವಧಿಗೆ ಮುಖ್ಯೋಪಾಧ್ಯಾಯರಾಗಿ ಸೇವೆ ಸಲ್ಲಿಸಿದ್ದಾರೆ.
ಇವರ ಪತಿ ಬಾಲಕೃಷ್ಣ ಗೌಡರು ಸುಳ್ಯದ ಪಿ.ಎಲ್.ಡಿ. ಬ್ಯಾಂಕ್ ವ್ಯವಸ್ಥಾಪಕರಾಗಿ ನಿವೃತ್ತರಾಗಿದ್ದಾರೆ.
ಪುತ್ರ ಜ್ಞಾನೇಶ್ ಬೆಂಗಳೂರಿನ ಮಲ್ಟಿನೇಶನ್ ಕಂಪೆನಿಯಲ್ಲಿ ಉದ್ಯೋಗಿಯಾಗಿದ್ದಾರೆ. ಪುತ್ರಿ ಶ್ರೀಮತಿ ಸ್ವಾತಿ ಬೆಂಗಳೂರಿನ ಮಲ್ಟಿನೇಶನ್ ಕಂಪೆನಿಯಲ್ಲಿ ಉದ್ಯೋಗಿಯಾಗಿದ್ದಾರೆ. ಅಳಿಯ ಅಕ್ಷಯ್ ಅವರು ಬೆಂಗಳೂರಿನ ಮಲ್ಟಿನೇಶನ್ ಕಂಪೆನಿಯಲ್ಲಿ ಉದ್ಯೋಗಿಯಾಗಿದ್ದಾರೆ.
ಜು.31ರಂದು ಅಪರಾಹ್ನ ಜಾಲ್ಸೂರಿನ ಪಯಸ್ವಿನಿ ಎಜ್ಯುಕೇಶನ್ ಸೊಸೈಟಿ (ರಿ.) ವತಿಯಿಂದ ನಡೆಯಲಿರುವ ಬೀಳ್ಕೊಡುಗೆ ಸಮಾರಂಭದಲ್ಲಿ ಪಯಸ್ವಿನಿ ಎಜ್ಯುಕೇಶನ್ ಸೊಸೈಟಿ ಅಧ್ಯಕ್ಷ ದೇರಣ್ಣ ಗೌಡ ಅಡ್ಡಂತಡ್ಕ ಅವರು ಅಧ್ಯಕ್ಷತೆ ವಹಿಸಲಿದ್ದಾರೆ.
ಕ್ಷೇತ್ರ ಶಿಕ್ಷಣಾಧಿಕಾರಿ ರಮೇಶ್ ಬಿ.ಈ. ಅವರು ಪಯಸ್ವಿನಿ ಎಜ್ಯುಕೇಶನ್ ಸೊಸೈಟಿ ವತಿಯಿಂದ ಶ್ರೀಮತಿ ಕುಸುಮಾವತಿ ಯು.ಪಿ. ಅವರನ್ನು ಸನ್ಮಾನಿಸಲಿದ್ದಾರೆ. ಅರಂತೋಡು ನೆಹರೂ ಮೆಮೋರಿಯಲ್ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಕೆ.ಆರ್. ಗಂಗಾಧರ ಅವರು ಸನ್ಮಾನ ನುಡಿಗಳನ್ನು ಮಾತನಾಡಲಿದ್ಧಾರೆ. ಜಾಲ್ಸೂರು ಗ್ರಾ.ಪಂ. ಅಧ್ಯಕ್ಷ ಕೆ.ಎಂ. ಬಾಬು ಅವರು ಅತಿಥಿಗಳಾಗಿ ಉಪಸ್ಥಿತರಿರಲಿದ್ದಾರೆ.