ದಬ್ಬಡ್ಕ : ಬೃಹತ್ ಗಾತ್ರದ ಹೆಬ್ಬಾವು ರಕ್ಷಣೆ

0

ಸಂಪಾಜೆ ವಲಯದ, ದಬ್ಬಡ್ಕ ಉಪ ವಲಯದ, ದಬ್ಬಡ್ಕ ಗ್ರಾಮದ ಪನೇಡ್ಕ ಸುಧಾ ಎಂಬುವವರ ಜಾಗದಲ್ಲಿ ಇದ್ದ ಬೃಹತ್ ಗಾತ್ರದ ಹೆಬ್ಬಾವನ್ನು ಕೃಷ್ಣ ಕಡೆಪಾಲ ಮತ್ತು ನಾರಾಯಣ ಕಡೆಪಾಲ ಇವರ ನೆರವಿನಿಂದ ಸೆರೆಹಿಡಿಯಲಾಯಿತು.

ಬಳಿಕ ಪಟ್ಟಿಘಾಟ್ ಮೀಸಲು ಅರಣ್ಯಕ್ಕೆ ಬಿಡಲಾಯಿತು. ಕಾರ್ಯಾಚರಣೆಯಲ್ಲಿ ದಬ್ಬಡ್ಕ ಉಪ ವಲಯದ ಸಿಬ್ಬಂದಿಗಳು ಪಾಲ್ಗೊಂಡರು.