ಅಜ್ಜಾವರ ಗ್ರಾ. ಪಂ.:ನೂತನ ಅಧ್ಯಕ್ಷೆ ಬೇಬಿ ಕಲ್ತಡ್ಕ, ಉಪಾಧ್ಯಕ್ಷ ಜಯರಾಮ ಅತ್ಯಡ್ಕ ಅಧಿಕಾರ ಸ್ವೀಕಾರ

0

ಅಜ್ಜಾವರ ಗ್ರಾಮ ಪಂಚಾಯತ್ ಅಧ್ಯಕ್ಷರಾಗಿ ಬೇಬಿ ಕಲ್ತಡ್ಕ, ಹಾಗೂ ಉಪಾಧ್ಯಕ್ಷರಾಗಿ ಜಯರಾಮ್ ಅತ್ಯಡ್ಕರವರು ಅಧಿಕಾರ ಸ್ವೀಕರಿಸಿದರು.

ಕಾರ್ಯಕ್ರಮದ ಆರಂಭದಲ್ಲಿ ನೂತನವಾಗಿ ಅಧ್ಯಕ್ಷರಾದ ಬೇಬಿ ಕಲ್ತಡ್ಕ ಹಾಗೂ ಉಪಾಧ್ಯಕ್ಷರಾಗಿ ಆಯ್ಕೆಯಾದ ಜಯರಾಮ ಅತ್ಯಡ್ಕ ಅವರನ್ನು ಪಂಚಾಯತ್ ಅಭಿವೃದ್ಧಿ ಅಧಿಕಾರಿಯಾದ ಜಯಮಾಲ ಅವರು ಸ್ವಾಗತಿಸಿ ಬರಮಾಡಿಕೂಂಡರು.

ಈ ಸಂದರ್ಭದಲ್ಲಿ ಮಾಜಿ ಪಂಚಾಯತ್ ಅಧ್ಯಕ್ಷರಾದ ಕರುಣಾಕರ ಅಡ್ಪಂಗಾಯ,ಮಾಜಿ ಉಪಾಧ್ಯಕ್ಷರಾದ ಲೀಲಾ ಮನಮೋಹನ್ , ಮಾಜಿ ಉಪಾಧ್ಯಕ್ಷರಾದ ಹಸೈನಾರ್ ಹಾಜಿ ಗೋರಡ್ಕ ಪಂಚಾಯತ್ ಸದಸ್ಯರಾದ ರಾಹುಲ್ ಅಡ್ಪಂಗಾಯ , ಅಬ್ದುಲ್ಲ ಅಜ್ಜಾವರ, ದೇವಕಿ ಮೇನಾಲ ,ಗೀತಾ ಮೇನಾಲ, ಶ್ವೇತ ಕುಮಾರಿ ಶಿರ್ವಾಜೆ, ದಿವ್ಯ ಪಂಡ್ಡಬೈಲು , ರಂಜಿತ್ ಮೇನಾಲ (ಯತ್ ಕಾಂಗ್ರೆಸ್ಸಿನ ಉಪಾಧ್ಯಕ್ಷ ಸುಳ್ಯ ಬ್ಲಾಕ್‌)ಅಬ್ಬಾಸ್ ಅಡ್ಪಂಗಾಯ ಕಾರ್ಯದರ್ಶಿ ಅಜ್ಜಾವರ ಗ್ರಾಮ ಕಾಂಗ್ರೆಸ್ ಸಮಿತಿ , ನಿಖಿಲ್ ಪಟಂಬೈಲು, ಪಂಚಾಯತ್ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು