ಸ.ಪ.ಪೂ.ಕಾ. ಗುತ್ತಿಗಾರಿನಲ್ಲಿ ಪ್ರೌಢಶಾಲಾ ವಿಭಾಗದ ವಾಲಿಬಾಲ್ ಪಂದ್ಯಾಟ

0

ಸ.ಪ.ಪೂ.ಕಾ.ಗುತ್ತಿಗಾರು ಪ್ರಥಮ

ಸ.ಪ.ಪೂ.ಕಾ.ಗುತ್ತಿಗಾರಿನಲ್ಲಿ ಆ‌16 ರಂದು ಪ್ರೌಢಶಾಲಾ ವಿಭಾಗದ ವಾಲಿಬಾಲ್ ಪಂದ್ಯಾವಳಿ ನಡೆಯಿತು.

ಕ್ಷೇತ್ರ ಶಿಕ್ಷಣಾಧಿಕಾರಿಗಳು ಬಿ ಇ. ರಮೇಶ್ ಪಂದ್ಯಾಟ ಉದ್ಘಾಟಿಸಿದರು. ಕಾಲೇಜಿನ ಪ್ರಾಂಶುಪಾಲರಾದ ಚೆನ್ನಮ್ಮ ಪಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

ಗ್ರಾ. ಪಂ. ಸದಸ್ಯರಾದ ವೆಂಕಟ್ ವಳಲಂಬೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಗ್ರಾಮ ಪಂಚಾಯತ್ ಸದಸ್ಯರಾದ ಶ್ರೀಮತಿ ಮಂಜುಳಾ ಮುತ್ಲಾಜೆ, ಮಾಯಿಲಪ್ಪ ಕೊಂಬೊಟ್ಟು, ದೈಹಿಕ ಶಿಕ್ಷಣ ಪರಿವೀಕ್ಷಕರಾದ ಸೂಪಿ ಪೇರಾಜೆ, ಜಿಲ್ಲಾ ದೈಹಿಕ ಶಿಕ್ಷಣ ಸಂಘದ ಅಧ್ಯಕ್ಷರಾದ ಶ್ರಿ ಗಣೇಶ್, ತಾಲೂಕು ದೈಹಿಕ ಸಂಘದ ಅಧ್ಯಕ್ಷರಾದ ಶ್ರೀ ಧನಂಜಯ, ಪಂಜ ವಲಯ ಅರಣ್ಯ ಇಲಾಖೆಯ ಬೀಟ್ ಗಾರ್ಡ್ ಧರ್ಣಪ್ಪ, ಕಾಲೇಜು ಸಿಬಿಸಿ ಕಾರ್ಯಧ್ಯಕ್ಷರಾದ ಗಿರೀಶ್ ಮಾವಾಜಿ, ಎಸ್ ಡಿ ಎಂ ಸಿ ಆಧ್ಯಕ್ಷರಾದ ಕೇಶವ ಗೌಡ ಕಾಂತಿಲ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪ್ರೌಢಶಾಲಾ ಮುಖ್ಯೋಪಾಧ್ಯಾಯರಾದ ನೆಲ್ಸನ್ ಕ್ಯಾಸ್ಟಲಿನೊ ಎಲ್ಲರನ್ನೂ ಸ್ವಾಗತಿಸಿದರೆ ಶಾಲಾ ದೈಹಿಕ ಶಿಕ್ಷಣ ಶಿಕ್ಷಕರಾದ ಶ್ರೀ ಗೋಪಾಲ್ ಏನೆಕಲ್ ವಂದಿಸಿದರು.‌


ಬಾಲಕರ ವಾಲಿಬಾಲ್ ನಲ್ಲಿ ಪ್ರಥಮ ಸ್ಥಾನವನ್ನು ಸ.ಪ.ಪೂ.ಕಾ.ಗುತ್ತಿಗಾರು ಪಡೆದರೆ, ದ್ವಿತೀಯ ಸ್ಥಾನವನ್ನು ಸರಕಾರಿ ಪ್ರೌಢಶಾಲೆ ಆಲೆಟ್ಟಿ ಪಡೆಯಿತು.
ಬಾಲಕಿಯರ ವಾಲಿಬಾಲ್ ಪಂದ್ಯಾಟದಲ್ಲಿ
ಪ್ರಥಮ ಸ್ಥಾನವನ್ನು ಸ.ಪ.ಪೂ.ಕಾ.ಗುತ್ತಿಗಾರು,
ದ್ವಿತೀಯ ಸ್ಥಾನವನ್ನು ಸೈಂಟ್ ಜೋಸೆಫ್ ಪ್ರೌಢಶಾಲೆ ಸುಳ್ಯ ಪಡೆಯಿತು.