ಪೊರಕೆ ಹಿಡಿದು ಸ್ವಚ್ಚತೆ ಆರಂಭಿಸಿದ ಗುತ್ತಿಗಾರು ಟಾಸ್ಕ್ ಫೋರ್ಸ್

0

ಗುತ್ತಿಗಾರು ಗ್ರಾಂ.ಪಂ ವ್ಯಾಪ್ತಿಯಲ್ಲಿ ಸ್ವಚ್ಛತೆಯ ಉದ್ದೇಶದಿಂದಲೇ ರಚನೆಯಾದ ಟಾಸ್ಕ್ ಫೋರ್ಸ್ ಇಂದು ಪೊರಕೆ ಹಿಡಿದು ಸ್ವಚ್ಚತೆ ಆರಂಭಿಸಿದೆ.

ಪ್ರತಿ ಗುರುವಾರ ಗುತ್ತಿಗಾರು ಪೇಟೆಯ ಸ್ವಚ್ಛತೆಯನ್ನು ಗಮನಿಸುವ ಕಾರ್ಯ ಮಾಡುತ್ತಿರುವ ಟಾಸ್ಕ್ ಫೋರ್ಸ್ ಇಂದು ಸ್ವತಃ ಪೊರಕ್ಕೆ ಹಿಡಿದು ಕೆಲ ಅಂಗಡಿಗಳ ಮುಂದೆ ಗುಡಿಸಿ ಸ್ವಚ್ಛತೆ ಮಾಡಿದೆ. ಗ್ರಾ. ಪಂಚಾಯತ್ ಮತ್ತು ಎಲ್ಲಾ ಸಂಘಟನೆಗಳ ಸಹಕಾರದಲ್ಲಿ ನಡೆಯುತ್ತಿರುವ ಈ ಸ್ವಚ್ಛತಾ ಅಭಿಯಾನ ಕಳೆದೆರಡು ತಿಂಗಳಿಂದ ನಡೆಯುತ್ತಿದ್ದು ಗುತ್ತಿಗಾರು ಸದಾ ಸ್ವಚ್ಚ ವಾಗಿಡಲು ಶ್ರಮಿಸುತ್ತಿದೆ.