ಕುದ್ರೆಪಾಯದ ವ್ಯಕ್ತಿ ನಾಪತ್ತೆ‌ : ಪೋಲೀಸ್ ದೂರು

0

ಮಡಿಕೇರಿ ತಾಲೂಕು ಎಂ.ಚೆಂಬು ಗ್ರಾಮದ ಕುದ್ರೆಪಾಯ ಅಪ್ಪಣ್ಣ ನಾಯ್ಕ ರವರು ಆ.23ರಂದು ನಾಪತ್ತೆಯಾಗಿರುವುದಾಗಿ ತಿಳಿದು ಬಂದಿದೆ. ಅಪ್ಪಣ್ಣ ನಾಯ್ಕರು ಬೆಳಗ್ಗಿನ ಜಾವ 4 ಗಂಟೆ ಯಿಂದ ನಾಪತ್ತೆಯಾಗಿದ್ದು, ಮನೆಯವರು ಮತ್ತು ಊರವರು ಹುಡುಕಾಟ ನಡೆಸಿದರೂ ಪತ್ತೆಯಾಗಲಿಲ್ಲ. ಈ ಬಗ್ಗೆ ಕೊಡಗು ಸಂಪಾಜೆ ಪೊಲೀಸ್ ಹೊರ ಠಾಣೆ ಯಲ್ಲಿ ದೂರು ನೀಡಲಾಗಿರುವುದಾಗಿ ತಿಳಿದುಬಂದಿದೆ.