ಕೆಲಸ ಅರಸಿ ಬಂದು ಬದುಕು ಕಳೆದುಕೊಂಡ ಅಮಾಯಕ‌ ಜೀವಗಳು

0

ಕಾರು ಢಿಕ್ಕಿ ಹೊಡೆದು ಮೂವರು ಕೂಲಿ ಕಾರ್ಮಿಕರು ದುರ್ಮರಣ

ಅಡ್ಕಾರು ಬಳಿ ಬೆಳ್ಳಂಬೆಳಿಗ್ಗೆ ಸಂಭವಿಸಿದ ದುರ್ಘಟನೆ: ಇಲ್ಲಿದೆ ಫುಲ್ ಡಿಟೇಲ್ಸ್

ಕೆಲಸ ಅರಸಿ ಬಂದಿದ್ದ ಹಾವೇರಿ ಮೂಲದ ಹತ್ತು ಮಂದಿ ಕೂಲಿ ಕಾರ್ಮಿಕರ ಪೈಕಿ ಮೂವರು ಕಾರು ಢಿಕ್ಕಿ ಹೊಡೆದು ಪ್ರಾಣ ಕಳೆದುಕೊಂಡ ದಾರುಣ ಘಟನೆಯೊಂದಕ್ಕೆ ಅಡ್ಕಾರು ಸಾಕ್ಷಿಯಾಗಿದೆ.

ಅಡ್ಕಾರಿನ ಹೊಟೇಲ್ ಕರಾವಳಿ ಬಳಿ ಇಂದು ಬೆಳ್ಳಂಬೆಳಗ್ಗೆ ಈ ದುರ್ಘಟನೆ ನಡೆಯಿತು.

ಹಾವೇರಿ ಜಿಲ್ಲೆಯ ರಾಣೆಬೆನ್ನೂರು ನಿವಾಸಿಗಳಾದ ಹತ್ತು ಮಂದಿಯ ತಂಡ ನಿನ್ನೆ ಗುತ್ತಿಗೆದಾರರೊಬ್ಬರ ಆಹ್ವಾನದ ಮೇರೆಗೆ ಈ ಭಾಗಕ್ಕೆ ಬಂದಿತ್ತು.

ಬಸ್ ನಲ್ಲಿ ಬಂದಿದ್ದ ಇವರು ಅಡ್ಕಾರಿಗೆ ಆಗಮಿಸಿ ಕರಾವಳಿ ಹೋಟೆಲ್ ಎದುರುಗಡೆ ಇರುವ ಅಂಗಡಿಯೊಂದರ ವರಾಂಡದಲ್ಲಿ ಆಶ್ರಯ ಪಡೆದಿದ್ದರು. ಇಂದು ಬೆಳಿಗ್ಗೆ ಈ ಪೈಕಿ ಅವರಲ್ಲಿ ಚೆನ್ನಪ್ಪ, ರೇಕಪ್ಪ, ವೆಂಕಪ್ಪ, ಮಾಂತೇಶ್ ಎಂಬ ಕಾರ್ಮಿಕರು ರಸ್ತೆ ಬದಿ ನಿಂತಿದ್ದರೆನ್ನಲಾಗಿದೆ.

ಬೆಳ್ಳಂ ಬೆಳಗ್ಗೆ ಹುಣಸೂರು ಕಡೆಯಿಂದ ಬಂದ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ರಾಂಗ್ ಸೈಡಿನಲ್ಲಿ ಬಂದು ರಸ್ತೆ ಬದಿ ನಿಂತಿದ್ದ ಈ ಕಾರ್ಮಿಕರಿಗೆ ಡಿಕ್ಕಿ ಹೊಡೆದು ಪಕ್ಕದಲ್ಲಿ ನಿಂತಿದ್ದ ಲಾರಿಗೂ ಡಿಕ್ಕಿ ಹೊಡೆಯಿತು.

ಡಿಕ್ಕಿ ಹೊಡೆದ ರಭಸಕ್ಕೆ ನಾಲ್ವರೂ ರಸ್ತೆಗೆಸೆಯಲ್ಪಟ್ಟು ಗಾಯಗೊಂಡರು. ಗಾಯಾಳುಗಳನ್ನು ಕಾರಿನವರು ಮತ್ತು ಸ್ಥಳೀಯರು ಕೂಡಲೇ ಸುಳ್ಯ ಸರ್ಕಾರಿ ಆಸ್ಪತ್ರೆಗೆ ಕೊಂಡೊಯ್ದರು. ಆ ವೇಳೆಗಾಗಲೇ ಈ ಪೈಕಿ ಚೆನ್ನಪ್ಪ( 50) ಸಾವನ್ನಪ್ಪಿದ್ದರು. ವೆಂಕಪ್ಪರಿಗೆ ಅಲ್ಪ ಸ್ವಲ್ಪ ಗಾಯಗಳಾಗಿದ್ದು ಅವರಿಗೆ ಸುಳ್ಯದಲ್ಲೇ ಚಿಕಿತ್ಸೆ ಕೊಡಿಸಲಾಯಿತು. ರೇಕಪ್ಪ ( 44 ) , ಮಾಂತೇಶ್ ( 63) ಅವರನ್ನು ಮಂಗಳೂರಿಗೆ ಕೊಂಡೊಯ್ಯಲಾಗಿದ್ದು, ರೇಕಪ್ಪ ಮೊದಲು ಹಾಗೂ ಮಾಂತೇಶ್ ನಂತರ ಸಾವನ್ನಪ್ಪಿದರು.

ಕಾರ್ಮಿಕರೆಲ್ಲರೂ ರಾಣೆಬೆನ್ನೂರು ಸಮೀಪದ ಕಾಕೋಟು ತಾಂಡ್ಯಾ ಕಡೆಯವರೆಂದು ತಿಳಿದುಬಂದಿದೆ.