ಸುಬ್ರಹ್ಮಣ್ಯ ಮಹಿಳಾ ಸೊಸೈಟಿ ಗುಮಾಸ್ತ ನಾಗೇಶ್ ಶೆಟ್ಟಿ ನಿವೃತ್ತಿ

0

ಸುಬ್ರಹ್ಮಣ್ಯದಲ್ಲಿ ಪ್ರಧಾನ ಕಚೇರಿ ಹೊಂದಿರುವ ಸುಳ್ಯ ತಾಲೂಕು ಮಹಿಳೆಯರ ವಿವಿಧೋದ್ದೇಶ ಸಹಕಾರ ಸಂಘದಲ್ಲಿ ಗುಮಾಸ್ತರಾಗಿ ಸೇವೆ ಸಲ್ಲಿಸುತ್ತಿದ್ದ ನಾಗೇಶ್ ಶೆಟ್ಟಿ ಯವರು ಆ. 31ರಂದು ನಿವೃತ್ತಿ ಹೊಂದಿದ್ದಾರೆ.


1963ರ ಆ. 28ರಂದು ಆನಂದ ಶೆಟ್ಟಿ ಮತ್ತು ಜಾನಕಿ ದಂಪತಿಯ ಮಗನಾಗಿ ಜನಿಸಿದ ನಾಗೇಶ್ ಶೆಟ್ಟಿ 1982 ಏ. 14ರಂದು ಸಂಸ್ಥೆ ಆರಂಭವಾಗುವ ಸಂದರ್ಭದಲ್ಲಿಯೇ ಸೇವೆಗೆ ಸೇರಿ ಸುಮಾರು 40 ವರ್ಷಗಳ ಕಾಲ ಸುದೀರ್ಘ ಸೇವೆ ಸಲ್ಲಿಸಿರುತ್ತಾರೆ.


ಇವರ ಪತ್ನಿ ಶ್ರೀಮತಿ ವನಿತಾ ಎನ್. ಶೆಟ್ಟಿ ಗೃಹಿಣಿಯಾಗಿದ್ದಾರೆ. ಪುತ್ರ ಕಾರ್ತಿಕ್ ಶೆಟ್ಟಿ ಕಾರ್ಕಳ ತಾಲೂಕಿನ ನಿಟ್ಟೆಯಲ್ಲಿ ಹೋಟೆಲ್ ಉದ್ಯಮವನ್ನು ನಡೆಸಿದರೆ, ಪುತ್ರಿ ಮಾನಸ ಪಿ. ಶೆಟ್ಟಿ ಬೆಂಗಳೂರಿನಲ್ಲಿ ಹೆಚ್.ಡಿ.ಎಫ್.ಸಿ. ಬ್ಯಾಂಕಿನಲ್ಲಿ ರಿಲೇಶನ್ ಶಿಫ್ ಮ್ಯಾನೇಜರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಅಳಿಯ ಪ್ರಜ್ವಲ್ ಶೆಟ್ಟಿ ಬೆಂಗಳೂರಿನಲ್ಲಿ ಐ.ಸಿಐ.ಸಿ.ಐ ಬ್ಯಾಂಕಿನಲ್ಲಿ ಮ್ಯಾನೇಜರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.